ಸಾರ್ವಜನಿಕರಲ್ಲಿ ಕೋವಿಡ್-19 ಕುರಿತಂತೆ ಜಾಗೃತಿ ಮೂಡಿಸಲು ಮುಂದಾದ ಚೆನ್ನೈ ರೈಲ್ವೇ ಪೊಲೀಸ್ ತನ್ನ ವಿಶಿಷ್ಟ ಪ್ರದರ್ಶನದಿಂದ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದೆ.
ಮುಖದ ಮಾಸ್ಕ್‌ಗಳನ್ನು ಧರಿಸಿ ಬಿಳಿ ಬಣ್ಣದ ಗ್ಲೌಸ್‌ಗಳಲ್ಲಿ ಕಂಗೊಳಿಸುತ್ತಿರುವ ರೈಲ್ವೇ ಪೊಲೀಸರು ಚೆನ್ನೈ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ವಿಶೇಷ ನೃತ್ಯ ಮಾಡಿದ್ದಾರೆ. ಎಂಜಾಯ್ ಎಂಜಾಮಿ ಎಂಬ ಜನಪ್ರಿಯ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಇದೇ ಹಾಡಿಗೆ ಕೇರಳ ಪೊಲೀಸರು ಸಹ ಸ್ಟೆಪ್ ಹಾಕಿದ್ದರು.
ಲಸಿಕೆ ವಿತರಣೆ ಬಗ್ಗೆ ಸಚಿವರಿಂದ ಭರ್ಜರಿ ಸಿಹಿ ಸುದ್ದಿ: ಮೇ 10 ರಿಂದ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್
ಪ್ರತಿನಿತ್ಯ ಸಹಸ್ರಾರು ಪ್ರಯಾಣಿಕರನ್ನು ಕಾಣುವ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ರೈಲ್ವೇ ಪೊಲೀಸರು, ಮಾಸ್ಕ್ ಹಾಕಿಕೊಳ್ಳುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹೇಗೆ ಎಂಬ ಸ್ಕಿಟ್ ಒಂದನ್ನು ಪ್ರದರ್ಶಿಸಿ ತೋರಿದ್ದಾರೆ.
ಪೊಲೀಸರ ಈ ಸಖತ್ ಡ್ಯಾನ್ಸ್ ಅನ್ನು ಪ್ರಯಾಣಿಕರು ಸುತ್ತುವರೆದು ವೀಕ್ಷಿಸಿ ಎಂಜಾಯ್ ಮಾಡಿದ್ದಾರೆ.
https://www.facebook.com/watch/?v=751336615560704&t=4