ಚೆನ್ನೈ: ಅದು ಚೆನ್ನೈ ಸಮೀಪ ಐಷಾರಾಮಿ ಹೋಟೆಲ್. ಅಲ್ಲಿ ಒಬ್ಬ ಸ್ಟಾಫ್ ಗೆ ಕೊರೋನಾ ಪರೀಕ್ಷೆ ನಡೆಸಿದ್ದು, ಪಾಸಿಟಿವ್ ಬಂದಿತ್ತು. ಬಳಿಕ ಅಲ್ಲಿನ ಎಲ್ಲ 609 ಮಂದಿಗೆ ಪರೀಕ್ಷೆಗಾಗಿ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್ ಕಳುಹಿಸಲಾಗಿತ್ತು. ಅದರ ವರದಿ ಈಗ ಬಂದಿದ್ದು, ಎಷ್ಟು ಜನಕ್ಕೆ ಪಾಸಿಟಿವ್ ಬಂದಿದೆ ಗೊತ್ತಾ..?
ಬರೋಬ್ಬರಿ 85 ಮಂದಿಗೆ ಪಾಸಿಟಿವ್ ವರದಿ ಬಂದಿದೆ. ಅಂದ ಹಾಗೆ ಗಿಂಡಿಯಲ್ಲಿನ ಹೋಟೆಲ್ ಹೆಸರು ಐಟಿಸಿ ಗ್ರಾಂಡ್ ಛೋಲ. ರಾಜ್ಯ ಆರೋಗ್ಯ ಕಾರ್ಯದರ್ಶಿ ಜೆ.ರಾಧಾಕೃಷ್ಣನ್ ಸೂಚನೆ ಮೇರೆಗೆ ಚೆನ್ನೈ ಕಾರ್ಪೋರೇಶನ್ ವತಿಯಿಂದ ಹೋಟೆಲ್ ವಾಸ್ತವ್ಯ ಹೂಡಿರುವವರಿಗೆ ಸ್ಯಾಚುರೇಶನ್ ಟೆಸ್ಟ್ ಮಾಡಿಸಿಕೊಳ್ಳಲು ಸಲಹೆ ನೀಡಲಾಗಿದೆ.
ಈ ಬಗ್ಗೆ ಸ್ಪಷ್ಟೀಕರಣ ಕೊಟ್ಟಿರು ಐಟಿಸಿ ಗ್ರಾಂಡ್ ಛೋಲ ಹೋಟೆಲ್ ಆಡಳಿತ ಮಂಡಳಿಯು, ಎಲ್ಲ ನಮ್ಮ ಸಹವರ್ತಿಗಳು ಹಾಗೂ ಅತಿಥಿಗಳ್ಯಾರೂ ಸಹ ಪರಸ್ಪರ ಸಂಪರ್ಕಕ್ಕೆ ಬಂದಿಲ್ಲ. ಹೆಚ್ಚಿನವರು ವರ್ಕ್ ಫ್ರಂ ಹೋಂ ಮೂಲಕ ಕಾರ್ಯನಿರ್ವಹಿಸುತ್ತಿದ್ದರು. ಹೀಗಿದ್ದರೂ ಪಾಸಿಟಿವ್ ಬಂದಿದೆ ಎಂದರೆ ನಮಗೆ ಅಚ್ಚರಿ ತಂದಿದೆ ಎಂದು ಹೇಳಿಕೆ ನೀಡಿದೆ. ಹೀಗಾಗಿ ಚೆನ್ನೈನ ಎಲ್ಲ ಐಷಾರಾಮಿ ಹೋಟೆಲ್ ಗಳಲ್ಲೂ ಸಹ ಈಗ ಸ್ಯಾಚುರೇಶನ್ ಟೆಸ್ಟ್ ಮಾಡಿಸಲು ಕಾರ್ಪೋರೇಶನ್ ತೀರ್ಮಾನ ತೆಗೆದುಕೊಂಡಿದೆ.