ಕೊರೊನಾ ವೈರಸ್ನಿಂದ ಚೇತರಿಕೆ ಕಂಡ ಮಹಿಳೆಯೊಬ್ಬರಿಗೆ ತಮ್ಮ ಕೆಲಸವನ್ನು ಮುಂದುವರೆಸಲು ನೆರವಾದ ಚೆನ್ನೈ ಪೊಲೀಸ್ ಸಿಬ್ಬಂದಿಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಮೆಚ್ಚುಗೆ ವ್ಯಕ್ತವಾಗಿದೆ.
ರಾಧಾ ಅಮ್ಮ ಹೆಸರಿನ ಈ ಮಹಿಳೆ ಇಲ್ಲಿನ ಅಪಾರ್ಟ್ಮೆಂಟ್ ಒಂದರಲ್ಲಿ ಮನೆಗೆಲಸದವರಾಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಕೊರೊನಾ ಬಂದಿದೆ ಎಂದು ತಿಳಿದ ಕೂಡಲೇ ಅವರನ್ನು ಕೆಲಸಕ್ಕೆ ಬಾರದಂತೆ ಸೂಚಿಸಲಾಗಿತ್ತು. ಕೊರೊನಾದಿಂದ ಗುಣಮುಖರಾದ ಮೇಲೂ ಸಹ ಅವರನ್ನು ಕೆಲಸಕ್ಕೆ ವಾಪಸ್ ಸೇರಿಸಿಕೊಂಡಿರಲಿಲ್ಲ.
ಇಂಥ ಸಮಯದಲ್ಲಿ ಅವರ ನೆರವಿಗೆ ಬಂದ ಐಪಿಎಸ್ ಅಧಿಕಾರಿ ಹಾಗೂ ಇಲ್ಲಿನ ತ್ಯಾಗರಾಜ ನಗರದ ಡಿಸಿಪಿ ಹರಿ ಕಿರಣ್ ಅವರು, ಆ ಅಪಾರ್ಟ್ಮೆಂಟ್ ಸಂಘದ ಪದಾಧಿಕಾರಿಗಳೊಂದಿಗೆ ಖುದ್ದು ಮಾತನಾಡಿ, ಅವರ ಮನವೊಲಿಸಿ ಮತ್ತೆ ರಾಧಾ ಅವರಿಗೆ ಕೆಲಸ ಸಿಗುವಂತೆ ಮಾಡಿದ್ದಾರೆ.