ತಂದೆ ಸಿನಿಮಾ ನಿರ್ಮಾಣ ಮಾಡೋಕೆ ಹಣ ಬೇಕು ಎಂಬ ಕಾರಣಕ್ಕೆ ಸಹೋದರರಿಬ್ಬರು ಕುರಿಗಳನ್ನ ಕದ್ದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ಸಿನಿಮಾ ಮಾಡೋಕೆ ಹೊರಟಿದ್ದ ತಂದೆ ಈ ಇಬ್ಬರು ಮಕ್ಕಳಿಗೆ ಮುಖ್ಯ ಪಾತ್ರ ಕೊಡೋದಾಗಿ ಹೇಳಿದ್ದರಂತೆ. ಹೀಗಾಗಿ ಕಳೆದ ಮೂರು ವರ್ಷಗಳಿಂದ ಇಬ್ಬರು ಸಹೋದರರು ಕುರಿ ಕಳ್ಳತನ ಮಾಡುತ್ತಿದ್ದರಂತೆ.
ತಾವು ಮಾಡಿದ ಕಳ್ಳತನ ಗಮನಕ್ಕೆ ಬರಬಾರದು ಎಂಬ ಕಾರಣಕ್ಕೆ ಅವರು ಎಲ್ಲಿಯೂ 2ಕ್ಕಿಂತ ಹೆಚ್ಚು ಕುರಿಗಳನ್ನ ಕದಿಯುತ್ತಿರಲಿಲ್ಲ.
ವಿ.ನಿರಂಜನರ್ ಕುಮಾರ್ (30) ಮತ್ತಾತನ ಸಹೋದರ ಲೆನಿನ್ ಕುಮಾರ್ (30) ಪ್ರತಿದಿನ 8-10 ಕುರಿಗಳನ್ನ ಕದಿಯುತ್ತಿದ್ದರು ಹಾಗೂ ಪ್ರತಿ ಕುರಿಯನ್ನ ಅಂದಾಜು 800 ರೂಪಾಯಿಗೆ ಮಾರಾಟ ಮಾಡುತ್ತಿದ್ದರಂತೆ.