ಚುಮುಚುಮು ಚಳಿ ನಿಧಾನವಾಗಿ ಆವರಿಸಿಕೊಳ್ತಿದೆ. ಚಳಿಗಾಲದಲ್ಲಿ ಮೊದಲು ತಡಕಾಡೋದು ಬೆಚ್ಚಗಿನ ಉಡುಪುಗಳನ್ನ. ವರ್ಷದಿಂದ ವರ್ಷಕ್ಕೆ ಟ್ರೆಂಡ್ ಬದಲಾಗ್ತಿರೋದ್ರಿಂದ, ಜನರು ಹೊಸ ಸ್ಟೈಲಿಶ್ ಆಗಿರೋ ಜ್ಯಾಕೆಟ್, ಕ್ಯಾಪ್, ಗ್ಲೌಸ್ಗಳನ್ನ ಖರೀದಿ ಮಾಡೋಕೆ ರೆಡಿಯಾಗ್ತಾರೆ. ಸಿಕ್ಕಿದ್ದೆ ಚಾನ್ಸ್ ಅಂತ ಈ ವುಲನ್ ಬಟ್ಟೆಗಳ ಬೆಲೆಯನ್ನು ದುಪ್ಪಟ್ಟು ಮಾಡಿ ಒಂದಕ್ಕೆರಡು ಮಾಡಿ ಮಾಲ್ ಗಳಲ್ಲಿ ಮಾರ್ತಿತ್ತಾರೆ.
ವರ್ಷವಿಡಿ ಚಳಿಗಾಲ ಇರಲ್ಲ. ಕೆಲವೇ ಕೆಲವು ತಿಂಗಳ ಚಳಿಗಾಲಕ್ಕೆ ಸಾವಿರಾರು ರೂಪಾಯಿ ಕೊಟ್ಟು ಒಂದೇ ಒಂದು ವುಲನ್ ಬಟ್ಟೆ ಖರೀದಿ ಮಾಡುವುದಕ್ಕೆ ಮನಸ್ಸಾಗೊದಿಲ್ಲ. ಚಳಿಗಾಲಕ್ಕೆ ಬೆಚ್ಚಗಿನ ಬಟ್ಟೆಯೂ ಬೇಕು, ಬೆಲೆಯೂ ಕಡಿಮೆ ಇರಬೇಕು ಎನ್ನುವವರಿಗೆ ಈ ಮಾರ್ಕೆಟ್ ಬೆಸ್ಟ್.
ದೆಹಲಿಗೆ ಗಾಂಧಿ ನಗರದ ಮಾರ್ಕೆಟ್ಗೆ ಹೋದರೆ ಸಾಕು. ನೀವು ಶಾಕ್ ಆಗ್ತಿರಾ. ಅಲ್ಲಿರುವ ಒಂದಕ್ಕಿಂತ ಒಂದು ಸ್ಟೈಲಿಶ್ ವುಲನ್ ಬಟ್ಟೆಗಳು 100ರಿಂದ 150 ರೂಪಾಯಿಗೆ ನಿಮಗೆ ಸಿಗುತ್ತೆ. ಇದು ಹೋಲ್ ಸೇಲ್ ಮಾರ್ಕೆಟ್. ಆದ್ರೆ ನಿಮಗೆ ಬೇಕಾದ ಬಟ್ಟೆಯನ್ನು ನೀವು ಖರೀದಿ ಮಾಡಬಹುದು. ಆರಂಭದಲ್ಲಿ ವ್ಯಾಪಾರಿಗಳು ಸಾವಿರದ ಮೇಲೆ ಬಟ್ಟೆ ಬೆಲೆ ಹೇಳ್ತಾರೆ. ಆದ್ರೆ ಚೌಕಾಶಿ ಮಾಡಿದ್ರೆ ಮಾತ್ರ ಕಡಿಮೆ ಬೆಲೆಗೆ ಬಟ್ಟೆ ಸಿಗುತ್ತೆ.
ದೆಹಲಿಯ ಗಾಂಧಿನಗರದಲ್ಲಿ ಕಂಡು ಬರುವ ಈ ಮಾರ್ಕೆಟ್ನಲ್ಲಿ ಸುಮಾರು 15 ಸಾವಿರಕ್ಕಿಂತಲೂ ಹೆಚ್ಚು ಅಂಗಡಿಗಳಿವೆ. ಈ ಮಾರ್ಕೆಟ್ನ ಇನ್ನೊಂದು ವಿಶೇಷವೆಂದ್ರೆ ಇದು ಏಷ್ಯಾದ ಅತಿ ದೊಡ್ಡ ಸಗಟು ಮಾರುಕಟ್ಟೆಯಾಗಿದೆ. ಇಲ್ಲಿನ ಜನರೇ ಬಟ್ಟೆ ಖರೀದಿಸಿ ಹೊಲಿಯುವುದರಿಂದ ಇಲ್ಲಿ ಈ ವುಲನ್ ಬಟ್ಟೆಗಳ ಬೆಲೆ ಕಡಿಮೆ.