ಒಂದು ಕಡೆ ಕೊರೊನಾ ಸೋಂಕು ಜನರನ್ನು ಹೈರಾಣು ಮಾಡಿದ್ದರೆ ಇನ್ನೊಂದು ಕಡೆ ಕೊರೊನಾ ಲಸಿಕೆ ಹಾಗೂ ಲಸಿಕೆಗೆ ಹೆಸರು ನೋಂದಾಯಿಸುವ ಪ್ರಕ್ರಿಯೆ ಜನರನ್ನು ಸಮಸ್ಯೆಗೊಡ್ಡಿತ್ತು. ಈಗ ಸರ್ಕಾರ ಕೊರೊನಾ ಲಸಿಕೆ ವಿಷ್ಯಕ್ಕೆ ಸಂಬಂಧಿಸಿದಂತೆ ಜನರ ಸಮಸ್ಯೆ ಪರಿಹರಿಸಲು ಮುಂದಾಗಿದೆ. ಲಸಿಕೆ ಪೋರ್ಟಲ್ ನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿದೆ.
ಮೇ.1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕಲು ಅನುಮತಿ ನೀಡಲಾಗಿದೆ. ಕೋವಿನ್ ಪೋರ್ಟಲ್ ನಲ್ಲಿ ಜನರು ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಆದ್ರೆ ಈ ಪೋರ್ಟಲ್ ನಲ್ಲಿ ಜನರು ಅನೇಕ ಸಮಸ್ಯೆ ಎದುರಿಸಿದ್ದರು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸರ್ಕಾರ ಪೋರ್ಟಲ್ ನಲ್ಲಿ ಬದಲಾವಣೆ ಮಾಡಿದೆ.
ಕೋವಿನ್ ಪೋರ್ಟಲ್ ನಲ್ಲಿ ಮಾಡಲಾದ ಪ್ರಮುಖ ಬದಲಾವಣೆಯೆಂದ್ರೆ ಡಿಜಿಟಲ್ ಕೋಡ್. ಕೋವಿನ್ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸುತ್ತಿದ್ದಂತೆ ಮೊಬೈಲ್ ನಲ್ಲಿ 4 ಅಂಕಿಗಳ ಡಿಜಿಟಲ್ ಕೋಡ್ ಬರಲಿದೆ. ಇದನ್ನು ಸರಿಯಾಗಿಟ್ಟುಕೊಳ್ಳಬೇಕು. ಲಸಿಕೆ ಹಾಕಿಸಿಕೊಂಡ ನಂತ್ರ ಈ ಕೋಡ್ ನೀಡಬೇಕು. ಇದ್ರ ನಂತ್ರವೇ ಲಸಿಕೆ ಸ್ಟೇಟಸ್ ಅಪ್ಡೇಟ್ ಆಗಲಿದೆ. ಲಸಿಕೆ ಹಾಕಿಸಿಕೊಳ್ಳದ ಕೆಲವರಿಗೆ ಲಸಿಕೆ ಹಾಕಿರುವ ಬಗ್ಗೆ ಸಂದೇಶ ಬಂದಿತ್ತು. ಇದಾದ ನಂತ್ರ ಸರ್ಕಾರ ಪೋರ್ಟಲ್ ನಲ್ಲಿ ಬದಲಾವಣೆ ಮಾಡಿದೆ. ಮೇ. 8ರಿಂದ ಕೋಡ್ ನೀಡದ ವ್ಯಕ್ತಿಗೆ ಲಸಿಕೆ ಹಾಕಲಾಗುವುದಿಲ್ಲ. ಇದು ಆನ್ಲೈನ್ ನಲ್ಲಿ ಬುಕ್ಕಿಂಗ್ ಮಾಡಿದವರಿಗೆ ಮಾತ್ರ ಲಭ್ಯವಾಗಲಿದೆ.