ಭಾರತೀಯ ಸಂವಿಧಾನದ ಆರ್ಟಿಕಲ್ 19(1)(ಎ) ಅಡಿಯಲ್ಲಿ ಹೆಸರನ್ನ ಬದಲಾವಣೆ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಕಬೀರ್ ಜೈಸ್ವಾಲ್ ಎಂಬವರು ಸಲ್ಲಿಸಿದ ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿ ಪಂಕಜ್ ಭಾಟಿಯಾ, ಸಂವಿಧಾನದ ಆರ್ಟಿಕಲ್ 19(1)(ಎ) ಅಡಿಯಲ್ಲಿ ವ್ಯಕ್ತಿ ತನ್ನ ಹೆಸರನ್ನ ಬದಲಾವಣೆ ಮಾಡಿಕೊಳ್ಳಲು ಅರ್ಹರಾಗಿದ್ದಾನೆ. ಹೆಸರಿನ ಬದಲಾವಣೆಗೆ ಸಮ್ಮತಿ ನೀಡದೇ ಇದ್ದರೆ ಅದು ಆ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡಿದಂತೆ ಎಂದು ಹೇಳಿದ್ದಾರೆ .
2 ತಿಂಗಳ ಅವಧಿಯಲ್ಲಿ ಅರ್ಜಿದಾರ ರಿಷು ಜೈಸ್ವಾಲ್ರ ಹೆಸರನ್ನ ಕಬೀರ್ ಜೈಸ್ವಾಲ್ ಎಂದು ದಾಖಲಿಸಿ ಹೊಸ ಪ್ರಮಾಣ ಪತ್ರವನ್ನ ನೀಡುವಂತೆ ಹೈಕೋರ್ಟ್ ಸಿಬಿಎಸ್ಇಗೆ ನಿರ್ದೇಶನ ನೀಡಿದೆ. ಅರ್ಜಿದಾರ 2011-13ರ ಶೈಕ್ಷಣಿಕ ವರ್ಷದಲ್ಲಿ ಸಿಬಿಎಸ್ಯ ನಡೆಸಿದ 12ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದರು. ದೆಹಲಿಯ ಸಂತೋಷ್ ಕುಮಾರ್ ಜೈಸ್ವಾಲ್ ಪುತ್ರ ರಿಷು ಜೈಸ್ವಾಲ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.
ತಮ್ಮ ಹೆಸರನ್ನ ಕಬೀರ್ ಎಂದು ಬದಲಾಯಿಸಲು ಮುಂದಾದ ಅರ್ಜಿದಾರ, ಭಾರತದ ಗೆಜೆಟ್ ಪ್ರಕಟಣೆ ನೋಟಿಸ್ ಪಡೆದು ಗೆಜೆಟ್ ಅಧಿಸೂಚನೆಯಂತೆ ಆಧಾರ್ ಹಾಗೂ ಪಾನ್ ಕಾರ್ಡ್ ಹೆಸರನ್ನ ಬದಲಾಯಿಸಿದ್ದರು. ಆದರೆ ಶಾಲಾ ಪ್ರಮಾಣ ಪತ್ರದಲ್ಲಿ ಹೆಸರು ಬದಲಾವಣೆಗೆ ಸಿಬಿಎಸ್ಇ ಬೋರ್ಡ್ ಚಕಾರವೆತ್ತಿತ್ತು.