ಮಹಾರಾಷ್ಟ್ರದ ಚಂದಾಪುರ ಜಿಲ್ಲೆಯ ನಾಗಪುರ ಅರಣ್ಯ ವ್ಯಾಪ್ತಿಯಲ್ಲಿ ನರಭಕ್ಷಕ ಹುಲಿಯೊಂದು 8 ಮಂದಿಯನ್ನ ಬಲಿ ತೆಗೆದುಕೊಂಡಿದ್ದು ಮಾತ್ರವಲ್ಲದೇ ಮೂವರಿಗೆ ಗಾಯ ಮಾಡಿ ಸ್ಥಳೀಯರ ನಿದ್ದೆಗೆಡಿಸಿದೆ. ಹುಲಿಯನ್ನ ಬಲೆಗೆ ಬೀಳಿಸೋಕೆ ಅರಣ್ಯ ಇಲಾಖೆ ಅಧಿಕಾರಿಗಳು ಇನ್ನಿಲ್ಲದ ಕಸರತ್ತನ್ನ ನಡೆಸಿದ್ದಾರೆ.
ಆರೇಳು ವರ್ಷ ವಯಸ್ಸಿನ ಹುಲಿ ಕಳೆದ 10 ತಿಂಗಳಿನಿಂದ ಚಂದಾಪುರ ಜಿಲ್ಲೆಯ ಜನತೆಗೆ ಕಂಟಕಪ್ರಾಯವಾಗಿದೆ. ಈ ಹುಲಿಯನ್ನ ಹಿಡಿಯೋಕೆ ಅಂತಾ ನಾಲ್ಕು ತಂಡಗಳನ್ನ ರಚಿಸಿರುವ ಅರಣ್ಯ ಇಲಾಖೆ ಅವಿರತ ಶ್ರಮಪಡುತ್ತಿದೆ.
ಗುರುವಾರ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ನರಭಕ್ಷಕ ಹುಲಿ ಬಂದು ಬಿದ್ದಿದೆ. ಇನ್ನೇನು ಅರಣ್ಯಾಧಿಕಾರಿಗಳು ನಿಟ್ಟುಸಿರು ಬಿಡಬೇಕು ಅನ್ನೋವಷ್ಟರಲ್ಲಿ ಬೋನಿನ ಬಾಗಿಲು ತೆರೆದು ಅಲ್ಲಿಂದ ಓಡಿಹೋಗುವಲ್ಲಿ ಹುಲಿ ಯಶಸ್ವಿಯಾಗಿದೆ ಅಂತಾ ಅರಣ್ಯಾಧಿಕಾರಿ ಎನ್.ಆರ್. ಪ್ರವೀಣ್ ಮಾಹಿತಿ ನೀಡಿದ್ದಾರೆ.