alex Certify Breaking News: ಕೋವಿಶೀಲ್ಡ್ ಎರಡು ಡೋಸ್ ಮಧ್ಯೆ ಅಂತರ ಹೆಚ್ಚಿಸಲು ರಾಜ್ಯಗಳಿಗೆ ಕೇಂದ್ರ ಪತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Breaking News: ಕೋವಿಶೀಲ್ಡ್ ಎರಡು ಡೋಸ್ ಮಧ್ಯೆ ಅಂತರ ಹೆಚ್ಚಿಸಲು ರಾಜ್ಯಗಳಿಗೆ ಕೇಂದ್ರ ಪತ್ರ

ತಜ್ಞರ ಸೂಚನೆ ಮೇರೆಗೆ ಕೊರೊನಾ ಲಸಿಕೆಯ ಎರಡು ಪ್ರಮಾಣಗಳ ಮಧ್ಯೆಯ ಅಂತರವನ್ನು ಹೆಚ್ಚಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ. ಕೊರೊನಾ ಲಸಿಕೆ ಕೋವಿಶೀಲ್ಡ್ ನ ಎರಡು ಡೋಸ್ ಮಧ್ಯೆ ಮೊದಲು 4-6 ವಾರಗಳ ಅಂತರವಿರುತ್ತಿತ್ತು. ಇದನ್ನು ಈಗ 4-8 ವಾರಗಳಿಗೆ ಹೆಚ್ಚಿಸಲಾಗಿದೆ.

ಎರಡು ಡೋಸ್ ಮಧ್ಯೆ ಹೆಚ್ಚಿಸಲಾದ ಅಂತರ ಕೋವಿಶೀಲ್ಡ್ ಗೆ ಮಾತ್ರ ಅನ್ವಯಿಸಲಿದೆ. ಕೊವ್ಯಾಕ್ಸಿನ್ ಗೆ ಅಲ್ಲವೆಂದು ಕೇಂದ್ರ ಸರ್ಕಾರ, ರಾಜ್ಯಗಳಿಗೆ ಬರೆದ ಪತ್ರದಲ್ಲಿ ಒತ್ತಿ ಹೇಳಿದೆ. ಕೋಶೀಲ್ಡ್ ನ ಎರಡನೇ ಡೋಸನ್ನು ಆರರಿಂದ ಎಂಟು ವಾರಗಳ ಒಳಗೆ ನೀಡಿದ್ರೆ ಹೆಚ್ಚು ಪರಿಣಾಮಕಾರಿ. ಆದ್ರೆ ಎಂಟು ವಾರಗಳ ನಂತ್ರ ಅಲ್ಲವೆಂದು ವೈಜ್ಞಾನಿಕ ಪುರಾವೆಗಳು ಸೂಚಿಸಿವೆ,

ಲಸಿಕಾ ಕಾರ್ಯಕ್ರಮದ ವ್ಯವಸ್ಥಾಪಕರು, ಲಸಿಕೆ ಹಾಕುವವರು ಮತ್ತು ಕೋವಿಶೀಲ್ಡ್ ಲಸಿಕೆ ಸ್ವೀಕರಿಸುವವರ ನಡುವೆ ಪರಿಷ್ಕೃತ ಡೋಸಿಂಗ್ ಮಧ್ಯಂತರದ ಸೂಚನೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು. ಪರಿಷ್ಕೃತ ಡೋಸಿಂಗ್ ಅಂತರವನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಕೇಂದ್ರ ಆರೋಗ್ಯ ಕಾರ್ಯದರ್ಶಿ, ರಾಜ್ಯಗಳಿಗೆ ಸೂಚಿಸಿದ್ದಾರೆ.

ಜನವರಿ 16ರಿಂದ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ಅಭಿಯಾನ ಶುರುವಾಗಿದೆ. ಈವರೆಗೆ 4.5 ಕೋಟಿ ಲಸಿಕೆ ಪ್ರಮಾಣವನ್ನು ಹಾಕಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...