12 ರಿಂದ 18 ವರ್ಷದ ಮಕ್ಕಳಿಗೆ ಶೀಘ್ರದಲ್ಲೇ ಜೈಡಸ್ ಕ್ಯಾಡಲ್ಲಾ ಕಂಪನಿಯ ಜೈಕೋವ್ ಡಿ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ಗೆ ಇಂದು ಮಾಹಿತಿ ನೀಡಿದೆ.
ಜೈಡಲ್ ಕ್ಯಾಡಲ್ಲಾ ಕಂಪನಿಯು 12 ರಿಂದ 18 ವರ್ಷದೊಳಗಿನವರಿಗೆ ತನ್ನ ಪ್ರಾಯೋಗಿಕ ಪರೀಕ್ಷೆಗಳನ್ನ ಪೂರ್ಣಗೊಳಿಸಿದೆ. ಅಲ್ಲದೇ ಇದು ಡಿಸಿಜಿಐಗೆ ತುರ್ತು ಅನುಮೋದನೆ ಕೋರಿ ಅರ್ಜಿ ಸಲ್ಲಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಅಹಮದಾಬಾದ್ ಮೂಲಕ ಫಾರ್ಮಾ ಕಂಪನಿಯು ಜುಲೈ 1ರಂದು ಜೈಕೋವ್ ಡಿ ಲಸಿಕೆ ತುರ್ತು ಅನುಮೋದನೆಗಾಗಿ ಅರ್ಜಿ ಸಲ್ಲಿಸಿದೆ. ಇದು ಮೂರು ಡೋಸ್ ಕೊರೊನಾ ಲಸಿಕೆಯಾಗಿದೆ. ಅಲ್ಲದೇ ವಿಶ್ವದ ಮೊಟ್ಟ ಮೊದಲ ಪ್ಲಾಸ್ಮಿಡ್ ಡಿಎನ್ಎ ಲಸಿಕೆ ಆಗಿದೆ.