ವಿಪರೀತ ಬೇಡಿಕೆ ಇದ್ದರೂ ಸಹ ಎಲ್ಲಾ ವಯೋಮಾನದ ಮಂದಿಗೂ ಕೋವಿಡ್ ಲಸಿಕೆ ಏಕೆ ನೀಡುತ್ತಿಲ್ಲ ಎಂಬ ವಿಚಾರವಾಗಿ ಕೇಂದ್ರ ಸರ್ಕಾರ ಸ್ಪಷ್ಟನೆ ಕೊಟ್ಟಿದೆ.
ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾತನಾಡಿ, “ಎಲ್ಲರಿಗೂ ಲಸಿಕೆ ಏಕೆ ಕೊಡಲು ಸಾಧ್ಯವಿಲ್ಲ ಎಂದು ಅನೇಕ ಜನರು ಕೇಳುತ್ತಿದ್ದಾರೆ. ಇಂಥ ಲಸಿಕೆ ಕಾರ್ಯಕ್ರಮದಲ್ಲಿ ಎರಡು ಉದ್ದೇಶಗಳು ಇರುತ್ತವೆ — ಸಾವುಗಳನ್ನು ನಿಯಂತ್ರಿಸುವುದು ಹಾಗೂ ಆರೋಗ್ಯ ವ್ಯವಸ್ಥೆ ಕಾಪಾಡಿಕೊಳ್ಳುವುದು. ಯಾರಿಗೆ ಬೇಕು ಎನ್ನುವುದಕ್ಕಿಂತ ಯಾರಿಗೆ ಅಗತ್ಯವಿದೆಯೋ ಅವರಿಗೆ ಲಸಿಕೆ ಹಾಕುವುದೇ ಗುರಿಯಾಗಿದೆ” ಎಂದು ರಾಜೇಶ್ ತಿಳಿಸಿದ್ದಾರೆ.
ಜನತೆಗೆ ತಟ್ಟಿದ ಸಾರಿಗೆ ಮುಷ್ಕರ ಬಿಸಿ, ಖಾಸಗಿ ವಾಹನಗಳಿಂದ ಸುಲಿಗೆ –ಪ್ರಯಾಣಿಕರ ಪರದಾಟ
ಸದ್ಯದ ಮಟ್ಟಿಗೆ 45 ವರ್ಷ ಮೇಲ್ಪಟ್ಟ ಜನರಿಗೆ ಮಾತ್ರವೇ ಕೋವಿಡ್ ಲಸಿಕೆ ಹಾಕಲು ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ. ಇದುವರೆಗೂ 8.31 ಲಸಿಕೆಗಳನ್ನು ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕೃತ ಮಾಹಿತಿ ತಿಳಿಸುತ್ತಿದೆ.