ಹವಾಮಾನ ಮುನ್ಸೂಚನೆ ಹಾಗೂ ವೈಪರೀತ್ಯಗಳ ಮುನ್ನೆಚ್ಚರಿಕೆ ನೀಡುವ ಮೊಬೈಲ್ ಕಿರು ತಂತ್ರಾಂಶವನ್ನು ಕೇಂದ್ರ ಭೂ ವಿಜ್ಞಾನ ಇಲಾಖೆ ಸಚಿವ ಡಾ. ಹರ್ಷವರ್ಧನ್ ಬಿಡುಗಡೆ ಮಾಡಿದ್ದಾರೆ.
’ಮೌಸಮ್’ ಹೆಸರಿನ ಈ ಮೊಬೈಲ್ ಕಿರು ತಂತ್ರಾಂಶವನ್ನು ಪುಣೆಯಲ್ಲಿರುವ ಭಾರತೀಯ ಉಷ್ಣ ವಲಯ ಹವಾಮಾನ ಅಧ್ಯಯನ ಸಂಸ್ಥೆ (IITM), ಭಾರತೀಯ ಹವಾಮಾನ ಇಲಾಖೆ ಹಾಗೂ ICRISATಗಳು ಸೇರಿ ಅಭಿವೃದ್ಧಿಪಡಿಸಿವೆ.
ಈ ಕಿರು ತಂತ್ರಾಂಶವು ಗೂಗಲ್‌ನ ಪ್ಲೇ ಸ್ಟೋರ್ ಹಾಗೂ ಆಪಲ್‌ನ ಆಪ್ ಸ್ಟೋರ್ ಗಳೆರಡರಲ್ಲೂ ಲಭ್ಯವಿದೆ. ಈ ಕಿರು ತಂತ್ರಾಂಶವು ದೇಶದ 200 ನಗರಗಳ ಪ್ರಸಕ್ತ ತಾಪಮಾನ, ತೇವಾಂಶ, ಆರ್ದ್ರತೆ, ಗಾಳಿಯ ವೇಗ ಹಾಗೂ ದಿಕ್ಕುಗಳ ವಿವರಗಳನ್ನು ಒದಗಿಸಲಿದೆ. ದಿನದಲ್ಲಿ ಎಂಟು ಬಾರಿ ಈ ಸಂಬಂಧ ಮಾಹಿತಿಯನ್ನು ಅಪ್‌ಡೇಟ್ ಮಾಡಲಾಗುವುದು.