ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬೃಹತ್ ಸಂಸತ್ ಭವನ ಕಟ್ಟಡದ ನಿರ್ಮಾಣಕ್ಕೆ ಸಕಲ ಸಿದ್ಧತೆ ನಡೆದಿದ್ದು, ಇದೇ ರೀತಿ ಪ್ರಧಾನಿ ವಸತಿ ಸಂಕೀರ್ಣವನ್ನೂ ಸುಮಾರು 13 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ ಎಂದು ಹೇಳಲಾಗಿದೆ.
ನಿರ್ಮಾಣವಾಗಲಿರುವ ಪ್ರಧಾನಿ ನೂತನ ನಿವಾಸ 4 ಮಹಡಿಗಳನ್ನು ಹೊಂದಿರಲಿದ್ದು, ಗರಿಷ್ಠ ಭದ್ರತಾ ವ್ಯವಸ್ಥೆಗಳನ್ನು ಒಳಗೊಂಡಿರಲಿದೆ. ವಸತಿ ಸಂಕೀರ್ಣ 15 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಲಾಗಿದೆ.
ಪ್ರಧಾನಿ ನಿವಾಸ ಸಂಕೀರ್ಣದಲ್ಲಿ ಒಟ್ಟು ಹತ್ತು ಕಟ್ಟಡಗಳು ನಿರ್ಮಾಣವಾಗಲಿವೆ ಎನ್ನಲಾಗಿದ್ದು, ಇದರ ನಿರ್ಮಾಣಕ್ಕೆ ಅಂದಾಜು 13,450 ಕೋಟಿ ರೂ. ವೆಚ್ಚ ತಗುಲಲಿದೆ ಎಂದು ಹೇಳಲಾಗಿದೆ.