alex Certify ನಡು ರಸ್ತೆಯಲ್ಲೇ ರಂಪ ಮಾಡಿ ಟ್ರಾಫಿಕ್‌ ಜಾಮ್‌ ಮಾಡಿದ ಯುವತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಡು ರಸ್ತೆಯಲ್ಲೇ ರಂಪ ಮಾಡಿ ಟ್ರಾಫಿಕ್‌ ಜಾಮ್‌ ಮಾಡಿದ ಯುವತಿ…!

ರಸ್ತೆ ಮಧ್ಯದಲ್ಲೇ ಜಗಳವಾಡಿದ ಗಂಡ‌ – ಹೆಂಡತಿಯ ಕಾರಣ ಟ್ರಾಫಿಕ್ ಜಾಮ್ ಆದ ಘಟನೆ ಮುಂಬೈನ ಪೆದ್ದರ್‌ ರಸ್ತೆಯಲ್ಲಿ ನಡೆದಿದೆ.

ನೆಟ್‌ನಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ, ಮಹಿಳೆಯೊಬ್ಬರು ತಮ್ಮ ರೇಂಜ್ ರೋವರ್‌ ಕಾರಿನ ಚಾಲನೆ ಮಾಡುತ್ತಿದ್ದ ತಮ್ಮದೇ ಪತಿಯನ್ನು ಹೊರಗೆಳೆದು ಜಗಳವಾಡಲು ಮುಂದಾಗಿದ್ದಾರೆ. ಆ ಕಾರಿನಲ್ಲಿ ತನ್ನ ಪತಿಯೊಂದಿಗೆ ಇದ್ದ ಮತ್ತೊಬ್ಬ ವ್ಯಕ್ತಿಯೊಂದಿಗೆ, ತನ್ನ ಪತಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಆಪಾದನೆ ಮಾಡಿದ ಪತ್ನಿ, ಕಾರಿನ ಬಾನೆಟ್‌ ಮೇಲೇರಿ ತನ್ನ ಚಪ್ಪಲಿಯನ್ನು ಗಾಜಿನ ಮೇಲೆ ಎಸೆದಿದ್ದಾಳೆ.

ಇವರ ಈ ಜಗಳ ದೊಡ್ಡ ಸೀನ್ ಸೃಷ್ಟಿಸಿದ್ದು, ಮಿಕ್ಕ ಸಂಚಾರಿಗಳಿಗೆ ಸಮಸ್ಯೆ ತಂದೊಡ್ದಿದ ವೇಳೆ ಸ್ಥಳಕ್ಕಾಗಮಿಸಿದ ಸಂಚಾರಿ ಪೊಲೀಸರು ಈ ಮೂವರನ್ನೂ ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿದ ಕಾರಣಕ್ಕೆ ಮಹಿಳೆಗೆ ದಂಡದ ಚಲನ್ ವಿತರಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...