ತಲೆಕೆಟ್ಟ ಐಟಿ ಉದ್ಯೋಗಿಯೊಬ್ಬ ತನ್ನ ಸಾಕು ಪ್ರಾಣಿಗೆ ಚಿತ್ರ ಹಿಂಸೆ ಕೊಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಹತ್ತು ತಿಂಗಳ ತನ್ನ ಸಾಕು ನಾಯಿಗೆ ಬೆಲ್ಟ್ನಲ್ಲಿ ಹೊಡೆದ ಈತ ಅದನ್ನು ಗೋಡೆಗೆ ಝಾಡಿಸಿದ್ದಾನೆ.
ನೋಯಿಡಾದಲ್ಲಿ ನಡೆದ ಈ ಘಟನೆಯಲ್ಲಿ ಐಟಿ ಉದ್ಯೋಗಿಯ ಈ ಪೈಶಾಚಿಕ ವರ್ತನೆಗೆ 10 ತಿಂಗಳ ಲ್ಯಾಬ್ರಡಾರ್ ನಾಯಿ ಮರಿಗೆ ಗಂಭೀರ ಗಾಯಗಳಾಗಿವೆ.
ವಿಡಿಯೋ ವೈರಲ್ ಆದ ಬಳಿಕ ಆಪಾದಿತ ರಿಶಭ್ ಮೆಹ್ತಾ ವಿರುದ್ಧ ಐಪಿಸಿ ಸೆಕ್ಷನ್ 428ರ ಅಡಿ ಪ್ರಕರಣ ದಾಖಲಿಸಲಾಗಿದೆ.