ವಿಚಿತ್ರ ಘಟನೆಯೊಂದರಲ್ಲಿ, ಕಾಶ್ಮೀರದಲ್ಲಿ ನಡೆಯುತ್ತಿರುವ ಕ್ರಿಕೆಟ್ ಟೂರ್ನಿಯೊಂದರ ವೇಳೆ ಪಂದ್ಯ ಪುರುಷೋತ್ತಮ ಪ್ರಶಸ್ತಿಯಾಗಿ 2.5 ಕೆಜಿ ತೂಕದ ಮೀನೊಂದನ್ನು ನೀಡಲಾಗಿದೆ.
ಪಂದ್ಯದ ಶ್ರೇಷ್ಠ ಆಟಗಾರರೊಬ್ಬರಿಗೆ ಮೀನನ್ನು ನೀಡಿ ಗೌರವಿಸುತ್ತಿರುವ ಚಿತ್ರವೊಂದು ವೈರಲ್ ಆಗಿದೆ. ಕುಪ್ವಾರಾದ ಟೇಕಿಪೋರಾದಲ್ಲಿ ಈ ಕ್ರಿಕೆಟ್ ಲೀಗ್ ಅನ್ನು ಆಯೋಜಿಸಲಾಗಿತ್ತು.
“ಈ ಟ್ರೋಫಿಗಳೆಲ್ಲಾ ಬರೀ ಶೋಕೇಸ್‌ನಲ್ಲಿ ಇಡೋದಕ್ಕೆ ಮಾತ್ರ. ಯಾವುದೇ ಕ್ರೀಡಾಪಟುವಿಗೆ ಉತ್ತಮ ಡಯೆಟ್ ಅಂದ್ರೆ ಬಹಳ ಮುಖ್ಯವಾಗಿದ್ದು, ಮೀನು ಅದಕ್ಕೆ ನೆರವಾಗಲಿದೆ. ಒಳ್ಳೆ ಅಭಿಯಾನ” ಎಂದು ಈ ಚಿತ್ರವನ್ನು ಕಂಡ ನೆಟ್ಟಿಗರೊಬ್ಬರು ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ.
https://twitter.com/biswadeeprath/status/1307961636494258176?ref_src=twsrc%5Etfw%7Ctwcamp%5Etweetembed%7Ctwterm%5E1307961636494258176%7Ctwgr%5Eshare_1&ref_url=https%3A%2F%2Fwww.timesnownews.com%2Fthe-buzz%2Farticle%2Fcatch-of-the-match-2-5-kg-fish-given-as-man-of-the-match-award-in-a-cricket-league-in-kashmir%2F656786