ಕೋವಿಡ್ ವಿರುದ್ಧದ ಹೋರಾಟದಲ್ಲಿ ನಮ್ಮ ದೇಶವಾಸಿಗಳಲ್ಲಿ ಥರಾವರಿಯ ಸಲಹೆ-ಸೂಚನೆಗಳು ಇವೆ. ಇವುಗಳ ಪೈಕಿ ಪ್ರಾರ್ಥನೆಗಳು ಹಾಗೂ ಮೌಢ್ಯಗಳ ಮೇಲೂ ಸಾಕಷ್ಟು ನಂಬಿಕೆಗಳು ಇರುವುದು ಅಚ್ಚರಿಯ ವಿಚಾರವೇನಲ್ಲ.
ನಮ್ಮಲ್ಲಿ ಸಂಖ್ಯಾಶಾಸ್ತ್ರದ ಮೇಲಿನ ನಂಬಿಕೆ ಬಹಳ ಆಳವಾದದ್ದು. ಕೊರೋನಾ ಹಾಗೂ ಕೋವಿಡ್-19 ಎಂಬ ಹೆಸರುಗಳ ಸ್ಪೆಲ್ಲಿಂಗ್ ಬದಲಿಸುವ ಮೂಲಕ ಈ ಸೋಂಕು ಕಾಣೆಯಾಗುತ್ತದೆ ಎಂದು ಹೇಳಿಕೊಂಡು ಪೋಸ್ಟರ್ ಹಾಕಿರುವ ವ್ಯಕ್ತಿಯೊಬ್ಬನ ಕಥೆಯನ್ನು ಟ್ವಿಟರ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.
ಪಾಪ್ಸಿಕಲ್ ಕಡ್ಡಿ ಕಲಾಕೃತಿ ಮೂಲಕ ಗಿನ್ನೆಸ್ ದಾಖಲೆ ಸೇರಿದ 12ರ ಪೋರ
ಕೊರೋನಾವನ್ನು ’ಕರೋನಾ’ ಎಂದೂ ಕೋವಿಡ್-19ಅನ್ನು ’ಕೊವ್ವಿಯಿಡ್-19’ ಎಂದೂ ಸ್ಪೆಲ್ ಮಾಡಿ ಬರೆದಿರುವ ಹೆಸರುಗಳನ್ನು ನಿಮ್ಮ ಮನೆಗಳ ಬಾಗಿಲುಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಾಕುವ ಪೋಸ್ಟರ್‌ಗಳಲ್ಲಿ ಬಳಸಿದರೆ ಕೊರೊನಾ ಕೇವಲ ಅನಂತಪುರಂ ಜಿಲ್ಲೆಯಲ್ಲಿ ಮಾತ್ರವಲ್ಲ ಜಗತ್ತಿನಿಂದಲೇ ಮಾಯವಾಗಿಬಿಡುತ್ತದೆ ಎಂದು ಹೇಳಿಕೊಂಡಿದ್ದಾರೆ ಆನಂದ್ ರಾವ್ ಹೆಸರಿನ ಈ ವ್ಯಕ್ತಿ. ಇವರು ಖುದ್ದು ತಮ್ಮ ಹೆಸರಿನ ಸ್ಪೆಲ್ಲಿಂಗ್ ಅನ್ನು ಸಹ ವಿಚಿತ್ರವಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ.