
ಪಲ್ಲಿಪಾಲಯಂ ಪಟಾಕಿ ಗೋದಾಮಿನಲ್ಲಿ ಅಗ್ನಿ ದುರಂತ ಉಂಟಾಗಿದ್ದು ಇಬ್ಬರು ಸಜೀವ ದಹನವಾಗಿದ್ದಾರೆ. ತಮಿಳುನಾಡಿನ ನಾಮಕಲ್ ಜಿಲ್ಲೆಯ ಪಲ್ಲಿಪಾಲಯಂ ಪಟಾಕಿ ಗೋದಾಮಿನಲ್ಲಿ ಈ ಘಟನೆ ನಡೆದಿದೆ.
ಪಟಾಕಿ ಗೋದಾಮಿನಲ್ಲಿ ಉಂಟಾದ ಸ್ಪೋಟದ ತೀವ್ರತೆಗೆ ಇಬ್ಬರು ಮೃತಪಟ್ಟಿದ್ದು ಐದಾರು ಮನೆಗಳು ಹಾನಿಗೀಡಾಗಿವೆ. ಸ್ಥಳಕ್ಕೆ ಅಗ್ನಿಶಾಮದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದು, ಪೊಲೀಸರು ಭೇಟಿ ನೀಡಿದ್ದಾರೆ.