ಪಂಚಾಯತ್ ಚುನಾವಣಾ ದಿನಾಂಕವನ್ನ ಮುಂದೂಡುವಂತೆ ಕೋರಿ ಆಂಧ್ರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಕೊರೊನಾ ಕಾರಣದಿಂದಾಗಿ ಪಂಚಾಯತ್ ಚುನಾವಣೆಯನ್ನ ಮುಂದೂಡುವಂತೆ ಆಂಧ್ರ ಸರ್ಕಾರ ಮನವಿ ಮಾಡಿತ್ತು. ಆದರೆ ಇದಕ್ಕಿಂತ ದೊಡ್ಡ ಚುನಾವಣೆಗಳನ್ನ ಕಷ್ಟದ ಸಂದರ್ಭದಲ್ಲಿ ದೇಶ ಎದುರಿಸಿದೆ. ಹೀಗಾಗಿ ಆಂಧ್ರ ಸರ್ಕಾರದ ವಾದದಲ್ಲಿ ಹುರುಳಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ನೆಮ್ಮದಿ ಸುದ್ದಿ: ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಕೇಂದ್ರ ಸರ್ಕಾರದಿಂದ ಉಚಿತ ಚಿಕಿತ್ಸೆ
ಇದು ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗದ ನಡುವಿನ ಪ್ರತಿಷ್ಟೆಯ ಯುದ್ಧದಂತೆ ಕಾಣುತ್ತಿದೆ. ಈ ಪ್ರತಿಷ್ಟೆಯ ಯುದ್ಧದಲ್ಲಿ ನಾವು ಭಾಗಿಯಾಗೋದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರಾಜ್ಯ ಚುನಾವಣಾ ಆಯುಕ್ತ ಎನ್. ರಮೇಶ್ ಕುಮಾರ್ ವಿರುದ್ಧದ ನಿರ್ಣಯಗಳ ಬಗ್ಗೆ ನಿರಾಶೆ ವ್ಯಕ್ತಪಡಿಸಿತು, ಅವರು ಚುನಾವಣೆಯನ್ನು ವೇಳಾಪಟ್ಟಿಯಂತೆ ನಡೆಸುವಂತೆ ಆದೇಶಿಸಿದ್ದರು.
ಕೋವಿಡ್ 19 ಲಸಿಕಾ ಅಭಿಯಾನ ನಡೆಯುತ್ತಿರುವ ಕಾರಣ ಪಂಚಾಯತ್ ಚುನಾವಣೆಯನ್ನು ಮುಂದೂಡಬೇಕೆಂದು ಆಂಧ್ರ ಪ್ರದೇಶ ಸರ್ಕಾರ ಮನವಿ ಮಾಡಿತ್ತು ಆದರೆ ರಾಜ್ಯ ಚುನಾವಣಾ ಆಯೋಗ ಶನಿವಾರ ಮೊದಲ ಹಂತದ ಚುನಾವಣೆ ನಡೆಸುವಂತೆ ಅಧಿಸೂಚನೆ ಹೊರಡಿಸಿತ್ತು.