alex Certify ‘ಆರೋಗ್ಯ ಸೇತು’ ಆಪ್​ ಕುರಿತು ಮಹತ್ವದ ಸೂಚನೆ ನೀಡಿದ ಹೈಕೋರ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಆರೋಗ್ಯ ಸೇತು’ ಆಪ್​ ಕುರಿತು ಮಹತ್ವದ ಸೂಚನೆ ನೀಡಿದ ಹೈಕೋರ್ಟ್

ಆರೋಗ್ಯ ಸೇತು ಆಪ್​ ಇಲ್ಲ ಎಂಬ ಕಾರಣಕ್ಕೆ ನಾಗರೀಕರಿಗೆ ಸರ್ಕಾರ ಅಥವಾ ಸರ್ಕಾರಕ್ಕೆ ಸಂಬಂಧಿಸಿದ ಅಂಗಸಂಸ್ಥೆಗಳು ಯಾವುದೇ ಸೌಲಭ್ಯಗಳನ್ನ ನಿರಾಕರಿಸುವ ಹಾಗಿಲ್ಲ ಅಂತಾ ಕರ್ನಾಟಕ ಹೈಕೋರ್ಟ್ ಸ್ಪಷ್ಟನೆ ನೀಡಿದೆ.

ಆರೋಗ್ಯ ಸೇತು ಆಪ್​ ಕಡ್ಡಾಯಗೊಳಿಸೋದು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಅನಿವರ್ ಎ. ಅರವಿಂದ್​ ಸಲ್ಲಿಸಿದ್ದ ಅರ್ಜಿಯನ್ನ ಮುಖ್ಯ ನ್ಯಾಯಾದೀಶ ಅಭಯ್​ ಶ್ರೀನಿವಾಸ್​ ಓಕಾ ಹಾಗೂ ನ್ಯಾ, ಅಶೋಕ್​ ಎಸ್ ವಿಚಾರಣೆ ನಡೆಸಿದರು,

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಕಾಲಿನ್​ ಗೊನ್ಸಾಲ್ವೆಸ್​​ ಇದು ಸಂವಿಧಾನದ 14, 19 ಹಾಗೂ 21ನೇ ವಿಧಿಯ ವಿರುದ್ಧವಾಗಿದೆ. ಯಾವುದೇ ಆಪ್​ಗಳನ್ನ ಇನ್​ಸ್ಟಾಲ್​ ಮಾಡೋದು ಬಿಡೋದು ನಾಗರಿಕನ ಮೂಲಭೂತ ಹಕ್ಕು. ಹೀಗಾಗಿ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಬೇಕು ಅಂತಾ ಒತ್ತಾಯಿಸಿದರು.

ಆರೋಗ್ಯಸೇತು ಆಪ್​ ಬಳಕೆ ಸ್ವಯಂಪ್ರೇರಿತವಾಗಿದೆ. ಆಪ್​ ಹೊಂದಿಲ್ಲದ ಕಾರಣ ಯಾವುದೇ ಸೇವೆ ನಿರಾಕರಿಸಲಾಗಿಲ್ಲ ಅಂತಾ ಕೇಂದ್ರ ಸರ್ಕಾರದ ಪರ ವಕೀಲ ಶ್ರೀ ಕುಮಾರ್​ ಕೋರ್ಟ್​ಗೆ ಸ್ಪಷ್ಟಪಡಿಸಿದ್ರು.

ಆರೋಗ್ಯ ಸೇತು ಆಪ್ ಹೊಂದಿಲ್ಲ ಎಂಬ ಒಂದೇ ಕಾರಣಕ್ಕೆ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ಯಾವುದೇ ಅಂಗಸಂಸ್ಥೆಗಳು ನಾಗರಿಕರಿಗೆ ಯಾವುದೇ ಸೌಲಭ್ಯ ಅಥವಾ ಸೇವೆಯನ್ನು ನಿರಾಕರಿಸುವಂತಿಲ್ಲ ಎಂದು ಹೇಳಿದ ರಾಜ್ಯ ಹೈಕೋರ್ಟ್ ವಿಚಾರಣೆಯನ್ನ ನ. 10ಕ್ಕೆ ಮುಂದೂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...