ಶತಮಾನಗಳ ಹಿಂದೆ ಭಾರತದ ವಾರಣಾಸಿಯಿಂದ ಕಳುವಾಗಿದ್ದ ಚಿನ್ನದ ಅನ್ನ ಪೂರ್ಣೇಶ್ವರಿ ಮೂರ್ತಿ ಶೀಘ್ರದಲ್ಲಿ ಸ್ವದೇಶಕ್ಕೆ ಮರಳಲಿದೆ.
ಸದ್ಯ ಮೂರ್ತಿ ಕೆನಡಾದ ರೆಗಿನಾ ಯುನಿವರ್ಸಿಟಿಯ ಮ್ಯಾಕ್ ಕೆನ್ ಜಿಯಾ ಆರ್ಟ್ ಗ್ಯಾಲರಿಯಲ್ಲಿದೆ. ಭಾರತದಿಂದ ಅನ್ಯಮಾರ್ಗದಿಂದ ಕೊಂಡೊಯ್ದ ಮೂರ್ತಿ ಶೀಘ್ರದಲ್ಲಿ ಮ್ಯಾಕ್ ಕೆಂಜಿನಾ ಆರ್ಟ್ ಗ್ಯಾಲರಿಯ ಶಾಶ್ವತ ಸಂಗ್ರಹಕ್ಕೆ ಸೇರಲಿತ್ತು ಎಂದು ಕಲಾವಿದೆ ದಿವ್ಯಾ ಮೆಹರಾ ಹೇಳಿದ್ದಾರೆ.
ಆದರೆ, ದೇಶದ ಬಾಂಧವ್ಯದ ದೃಷ್ಟಿಯಿಂದ ವಿವಿ ಮೂರ್ತಿಯನ್ನು ಮರಳಿಸಲು ಮುಂದಾಗಿದೆ. ಪ್ರಾಥಮಿಕ ಹಂತದ ವರ್ಚುವಲ್ ಮಾತುಕತೆ ನ.19 ರಂದು ನಡೆದಿದೆ. ವಿವಿ ಉಪ ಕುಲಪತಿ ಡಾ.ಥಾಮಸ್ ಅವರು ಕೆನಡಾದ ಭಾರತೀಯ ಹೈ ಕಮಿಷನರ್ ಅಜಯ್ ಬಿಸಾರಿಯಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಶೀಘ್ರದಲ್ಲಿ ಕೆನಡಾ ಗಡಿ ಸೇವಾ ಏಜೆನ್ಸಿ, ವಿದೇಶಾಂಗ ಸಚಿವಾಲಯ ಹಾಗೂ ಮೆಕ್ ಕೆಂಜಿಯಾ ಆರ್ಟ್ ಗ್ಯಾಲರಿಯ ಅಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರ ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಯುನಿವರ್ಸಿಟಿ ನಡೆಗೆ ಭಾರತೀಯ ಹೈ ಕಮೀಷನರ್ ಬಿಸಾರಿಯಾ ಅಭಿನಂದಿಸಿದ್ದಾರೆ.