ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಚಾಲೆಂಜ್ ಬರುವುದು ಸಹಜ. ಆದರೆ ಕೆಲವೊಂದು ಚಾಲೆಂಜ್ ಗಳು ನೆಟ್ಟಿಗರ ಮೆದುಳಿಗೆ ಕೈ ಹಾಕುತ್ತವೆ. ಆ ರೀತಿಯ ಚಾಲೆಂಜ್ ಇಲ್ಲಿದೆ.
ಹೌದು, ಫೀಜಾಲೇವರ್ಸ್ ಎನ್ನುವ ಖಾತೆಯಿಂದ ಒಂದು ಫೋಟೋವನ್ನು ಹಾಕಿದ್ದು, ಇದರಲ್ಲಿ ಬೆಕ್ಕು ಎಲ್ಲಿದೆ ಎಂದು ಹುಡುಕುವಂತೆ ಹೇಳಿದ್ದಾನೆ. ಆದರೆ ಮೊದಲ ನೋಟದಲ್ಲಿ ಯಾರಿಗೂ ಬೆಕ್ಕು ಕಾಣಿಸಿಲ್ಲ.
ಅನೇಕರು ಫೋಟೋ ಝೂಮ್ ಮಾಡಿ ಫೋಟೋವನ್ನು ಪರಿಶೀಲಿಸಿದ್ದಾರೆ. ಆದರೆ ಎಲ್ಲಿಯೂ ಬೆಕ್ಕು ಕಾಣಿಸಿಲ್ಲ. ಬಳಿಕ ಅಸ್ಪಷ್ಟವಾಗಿ ಬೆಕ್ಕು ಕಾಣಿಸಿದೆ. ಇದೀಗ ಬೆಕ್ಕು ಎಲ್ಲಿದೆ ಎನ್ನುವುದನ್ನು ಕಂಡು ಹಿಡಿಯಲು ಕಳೆದ ಮೂರು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಇದರೊಂದಿಗೆ ಇದಕ್ಕಾಗಿಯೇ ಕೆಲವು ಗ್ರೂಪ್‌ಗಳು ಶುರುವಾಗಿದೆ.
ಇದೀಗ ಈ ಫೋಟೋ ಭಾರಿ ವೈರಲ್ ಆಗಿದ್ದು, 27ಸಾವಿರಕ್ಕೂ ಹೆಚ್ಚು ಲೈಕ್, ಸಾವಿರಾರು ಕಾಮೆಂಟ್ ಬಂದಿವೆ. ನೀವು ಒಮ್ಮೆ ಬೆಕ್ಕು ಎಲ್ಲಿದೆ ಎಂದು ನೋಡಿ……