ಹಿಂದೆ ಮೊಬೈಲ್ ಅಂದ್ರೆ, ಇಂಟರ್ನೆಟ್ ಅಂದ್ರೆ ಏನು ಅನ್ನೋದು ಗೊತ್ತೇ ಇರದ ಕಾಲವೊಂದಿತ್ತು. ವಿಡಿಯೋ ಗೇಂಗಳ ಗಂಧ ಗಾಳಿಯೂ ಆಗಿನ ಕಾಲದ ಮಕ್ಕಳಿಗೆ ಗೊತ್ತಿರಲಿಲ್ಲ. ಕುಂಟೆ ಬಿಲ್ಲೆ, ಕಣ್ಣಾ ಮುಚ್ಚಾಲೆ, ಲಗೋರಿ ಅಬ್ಬಬ್ಬಾ ಒಂದಾ ಎರಡಾ…..
ಆದರೆ ಈಗ ಕಾಲ ಬದಲಾಗಿದೆ. ಗ್ರಾಮೀಣ ಕ್ರೀಡೆಗಳು ಮೂಲೆ ಸೇರಿವೆ. ಆಧುನಿಕತೆ ಅನ್ನೋ ಟಚ್ ಪಡೆದಿರೋ ಈ ಕಾಲದಲ್ಲಿ ತಮ್ಮ ಹಳೆಯ ದಿನಗಳನ್ನ ನೆನಪಿಸಿದ್ದಾರೆ ಐಪಿಎಸ್ ಆಫಿಸರ್ ದೀಪಾಂಶು ಕಬ್ರಾ.
ಟ್ವಿಟರ್ನಲ್ಲಿ ಮಕ್ಕಳು ರತ್ತೋ ರತ್ತೋ ರಾಯನ ಮಗಳೇ…..ಎಂಬ ಆಟವನ್ನ ಆಡ್ತಿರೋ ಫೋಟೋ ಶೇರ್ ಮಾಡಿ ಈ ಆಟ ಯಾವುದೆಂದು ನೆನಪಿದ್ಯಾ..? ಇದರ ಹೆಸರು ಹೇಳಬಹುದಾ ಅಂತಾ ಬರೆದುಕೊಂಡಿದ್ದಾರೆ.
ದೀಪಾಂಶು ಈ ಫೋಟೋ ಹಾಕ್ತಿದ್ದಂತೆಯೇ ಕಾಮೆಂಟ್ಸ್, ಲೈಕ್ಸ್ಗಳ ಸುರಿಮಳೆಯೇ ಹರಿದು ಬಂದಿದೆ. ಅನೇಕರು ನಮಗಿನ್ನು ಆ ಹಾಡು ನೆನಪಿದೆ ಅಂತಾ ಹೇಳಿದ್ರೆ, ಇನ್ನು ಕೆಲವರು ನಮ್ಮನ್ನ 30 ವರ್ಷಗಳ ಹಿಂದಕ್ಕೆ ಕರೆದೊಯ್ದ ನಿಮಗೆ ಧನ್ಯವಾದ ಅಂತಾ ಬರೆದಿದ್ದಾರೆ.