
ಈ ಮಾತಿಗೆ ಸಾಕ್ಷಿ ಎಂಬಂತೆ ಭವ್ಯವಾದ ದೇವಾಲಯ, ದೀಪಗಳ ಬೆಳಕಿನಿಂದಲೇ ಅಂದ ಹೆಚ್ಚಿಸಿಕೊಂಡ ನದಿ ತೀರ, ಹಬ್ಬದ ಆಚರಣೆಗಳನ್ನೊಳಗೊಂಡ ಫೋಟೋಗಳನ್ನ ಶೇರ್ ಮಾಡಿದ ಲಾಸ್ಟ್ ಟೆಂಪಲ್ ಎಂಬ ಟ್ವಿಟರ್ ಖಾತೆ, ಈ ಮಹಾ ನಗರವನ್ನ ಗುರುತಿಸಬಲ್ಲಿರೇ..? ಎಂದು ಪ್ರಶ್ನೆ ಮಾಡಿತ್ತು. ಲಾಸ್ಟ್ ಟೆಂಪಲ್ನ ಈ ಪ್ರಶ್ನೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಿದ್ದಾರೆ.
ಈ ಫೋಟೋದಲ್ಲಿರುವ ನಗರ ಉತ್ತರ ಪ್ರದೇಶದ ಕಾಶಿ ಹಾಗೂ ರತ್ನೇಶ್ವರ ದೇವಾಲಯ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಖಂಡಿತವಾಗಿಯೂ ನಾನಿದಕ್ಕೆ ಉತ್ತರ ನೀಡಬಲ್ಲೆ. ಕೆಲವು ವರ್ಷಗಳ ಹಿಂದೆ ನಾನೇ ಈ ಫೋಟೋವನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದ್ದೆ. ಇದು ಕಾಶಿಯ ರತ್ನೇಶ್ವರ ಮಹದೇವ ದೇವಾಲಯ ಎಂದು ಬರೆದು ಟ್ವೀಟ್ ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 2017ರಲ್ಲಿ ದೀಪಾವಳಿ ಹಬ್ಬದ ವಿಶೇಷವಾಗಿ ಈ ಫೋಟೋಗಳನ್ನ ಹಂಚಿಕೊಂಡಿದ್ದರು.