alex Certify BIG NEWS: ಪ್ರಾಣಿಗಳಿಂದಲೂ ಮಾನವರಿಗೆ ತಗುಲುತ್ತಾ ಕೊರೊನಾ…? ಇಲ್ಲಿದೆ ತಿಳಿದುಕೊಳ್ಳಲೇಬೇಕಾದ ಬಹುಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪ್ರಾಣಿಗಳಿಂದಲೂ ಮಾನವರಿಗೆ ತಗುಲುತ್ತಾ ಕೊರೊನಾ…? ಇಲ್ಲಿದೆ ತಿಳಿದುಕೊಳ್ಳಲೇಬೇಕಾದ ಬಹುಮುಖ್ಯ ಮಾಹಿತಿ

ನವದೆಹಲಿ: ಕೊರೋನಾ ಸೋಂಕಿನ ಕಾರಣದಿಂದಾಗಿ ದೇಶದಲ್ಲಿ ಪ್ರಾಣಿಗಳ ಮೊದಲ ಸಾವು ಚೆನ್ನೈ ಮೃಗಾಲಯದಲ್ಲಿ ಸಂಭವಿಸಿದೆ ಎಂದು ನಂಬಲಾಗಿದೆ. ಚೆನ್ನೈ ಮೃಗಾಲಯದ 9 ವರ್ಷದ ಸಿಂಹಿಣಿ ಕೋವಿಡ್ ಪಾಸಿಟಿವ್ ನಿಂದ ಮೃತಪಟ್ಟಿರುವುದಾಗಿ ಹೇಳಲಾಗಿದ್ದು, ಅಧಿಕಾರಿಗಳು ಇದನ್ನು ಆಧರಿಸಿ ಆನೆಗಳ ಗುಂಪನ್ನು ಪರೀಕ್ಷಿಸಿ ಯಾವುದಾದರೂ ಸೋಂಕು ಇದೆಯೇ ಎಂದು ಪರಿಶೀಲನೆ ನಡೆಸಿದ್ದಾರೆ.

ಕೋವಿಡ್ -19 ಕ್ಕೆ ಕಾರಣವಾಗಬಹುದು ಎನ್ನಲಾದ SARS-CoV-2 ವೈರಸ್ ಅನ್ನು ಮಾನವರಲ್ಲಿ ಮೊದಲ ಬಾರಿಗೆ 2019 ರ ಡಿಸೆಂಬರ್ ನಲ್ಲಿ ಗುರುತಿಸಲಾಗಿತ್ತು. ಜೂನ್ 9 ರ ಹೊತ್ತಿಗೆ ವಿಶ್ವದಾದ್ಯಂತ 175 ದಶಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ಬಾಧಿಸಿದ್ದು, ಈ ವೈರಸ್ ಬಾವಲಿಗಳೊಂದಿಗೆ ಸಂಬಂಧಿಸಿದೆ ಎಂದು ನಂಬಲಾಗಿದ್ದರೂ, SARS-CoV-2 ವೈರಸ್ ನ ಮೂಲ ಮತ್ತು ಮಧ್ಯಂತರ ಹೋಸ್ಟ್ ಗಳನ್ನು ಇನ್ನೂ ಗುರುತಿಸಿಲ್ಲ.

ಉಸಿರಾಟದ ಹನಿಗಳ ಮತ್ತು ನಿಕಟ ಸಂಪರ್ಕದ ಮೂಲಕ ವೈರಸ್ ಹರಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಆದರೆ, ಮಾನವರು ಮತ್ತು ಪ್ರಾಣಿಗಳ ನಡುವೆ ಸೋಂಕು ಹರಡಿದ ಉದಾಹರಣೆಗಳು ಇವೆ. ಮಾನವನೊಂದಿಗೆ ಸಂಪರ್ಕದಲ್ಲಿರುವ ಹಲವಾರು ಪ್ರಾಣಿಗಳಾದ ನಾಯಿಗಳು, ಸಾಕು ಬೆಕ್ಕುಗಳು, ಸಿಂಹಗಳು, ಹುಲಿಗಳನ್ನು SARS-CoV-2 ಪಾಸಿಟಿವ್ ಆಗಿ ಪರೀಕ್ಷಿಸಲಾಗಿದೆ.

ಮನುಷ್ಯರಿಗೆ ಪ್ರಾಣಿಗಳಿಂದ COVID-19 ತಗುಲಬಹುದೇ…?

ಬಾವಲಿಗಳಿಂದ ಮನುಷ್ಯರಿಗೆ ಕೊರೋನಾ ವೈರಸ್ ಹರಡುವ ಪ್ರಕರಣಗಳ ಸಂಶೋಧನೆ ನಡೆಯುತ್ತಿದೆ. ಸಿಡಿಸಿ ಹೇಳುವಂತೆ, ಈ ಸಮಯದಲ್ಲಿ SARS-CoV-2 ಜನರಿಗೆ ಹರಡುವಲ್ಲಿ ಪ್ರಾಣಿಗಳು ಮಹತ್ವದ ಪಾತ್ರ ವಹಿಸುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲ. ಪ್ರಾಣಿಗಳಿಂದ ಮನುಷ್ಯರಿಗೆ ಕೋವಿಡ್ ಹರಡುವ ಅಪಾಯ ಕಡಿಮೆ ಎಂದು ಪರಿಗಣಿಸಲಾಗಿದೆ. ಆದರೂ, ಇತ್ತೀಚೆಗೆ ನೆದರ್ಲ್ಯಾಂಡ್, ಡೆನ್ಮಾರ್ಕ್ ಮತ್ತು ಪೋಲೆಂಡ್ ನಲ್ಲಿ ಕೋವಿಡ್ -19 ಮಿಂಕ್ ಮತ್ತು ಒಟ್ಟರ್ಸ್ ನಿಂದ ಮನುಷ್ಯರಿಗೆ ಹರಡಿದ ಪ್ರಕರಣ ವರದಿಯಾಗಿದೆ. ಯುಎಸ್ ನಲ್ಲಿಯೂ ಪ್ರಕರಣಗಳು ವರದಿಯಾಗಿವೆ. ಆದರೆ, ಸಿಡಿಸಿ ‘ಸೋಂಕಿತ ಕಾರ್ಮಿಕರು SARS-CoV-2 ಅನ್ನು ಹೊಲಗಳಲ್ಲಿ ಮಿಂಕ್ ಗಳಿಗೆ ಪರಿಚಯಿಸಿದ್ದಾರೆ, ನಂತರ ವೈರಸ್ ಮಿಂಕ್ ನಡುವೆ ಹರಡಲು ಪ್ರಾರಂಭಿಸಿತು ಎಂದು ಹೇಳಲಾಗಿದೆ.

SARS-CoV-2 ಸೋಂಕಿನೊಂದಿಗೆ ಪ್ರಾಣಿಗಳು

ಸಿಡಿಸಿ ಪ್ರಕಾರ, ಸಹವರ್ತಿ ಪ್ರಾಣಿಗಳಾದ ಬೆಕ್ಕು, ನಾಯಿ, ಪ್ರಾಣಿ ಸಂಗ್ರಹಾಲಯದಲ್ಲಿರುವ ಅಥವಾ ಅಭಯಾರಣ್ಯದಲ್ಲಿರುವ ದೊಡ್ಡ ಬೆಕ್ಕುಗಳು, ಪ್ರಾಣಿಸಂಗ್ರಹಾಲಯಗಳಲ್ಲಿನ ಗೋರಿಲ್ಲಾಗಳು, ಹೊಲದಲ್ಲಿರುವ  ಮಿಂಕ್ ಗಳಿಗೆ ಇತರೆ ಕೆಲವು ಸಸ್ತನಿಗಳಿಗೆ SARS-CoV-2 ತಗುಲಿರಬಹುದು. ಆದರೆ ಇನ್ನು ಎಲ್ಲವೂ ತಿಳಿದಿಲ್ಲ ಎಂಬುದನ್ನು ಗಮನಿಸಬೇಕಿದೆ. ಸೋಂಕಿಗೆ ಒಳಗಾಗುವ ಪ್ರಾಣಿಗಳು ವಿಶ್ವದಾದ್ಯಂತ ಪ್ರಾಣಿಗಳಿಗೆ ಸೋಂಕು ತಗುಲಿದ ವರದಿಗಳು ಬಂದಿವೆ. ಕೋವಿಡ್ -19 ಪಾಸಿಟಿವ್ ಬಂದ ಜನರೊಂದಿಗಿನ ಜನರ ಸಂಪರ್ಕದ ನಂತರ ಈ ಪ್ರಾಣಿಗಳಲ್ಲಿ ಹೆಚ್ಚಿನವು ಸೋಂಕಿಗೆ ಒಳಗಾಗಿವೆ.

ನೀವು ಸಾಕುಪ್ರಾಣಿಗಳನ್ನು ಹೊಂದಿದ್ದರೆ ಏನು ಮಾಡಬೇಕು…?

ನೀವು ಸಾಕುಪ್ರಾಣಿಗಳನ್ನು ಹೊಂದಿದ್ದರೆ, ಇತರೆ ಕುಟುಂಬ ಸದಸ್ಯರಿಂದ ಸಂಭಾವ್ಯ ಕೋವಿಡ್-19 ಸೋಂಕಿನಿಂದ ರಕ್ಷಿಸಲು ಅವುಗಳಿಗೆ ರಕ್ಷಣೆ ನೀಡಬೇಕು. ಕೋವಿಡ್ -19 ಹೊಂದಿರುವ ಜನರು ಪ್ರಾಣಿಗಳಿಗೆ ಸೋಂಕು ಹರಡುವ ಅಪಾಯವಿರುವುದರಿಂದ ಸಾಕು ಪ್ರಾಣಿಗಳ ಮಾಲೀಕರು ಅಂತಹ ಜನರೊಂದಿಗೆ ತಮ್ಮ ಸಾಕು ಪ್ರಾಣಿಗಳ ಸಂವಹನವನ್ನು ಮಿತಿಗೊಳಿಸಬೇಕು. ಸಾಧ್ಯವಾದಾಗ ಬೆಕ್ಕುಗಳನ್ನು ಮನೆಯಲ್ಲೇ ಇರಿಸಿಕೊಳ್ಳಬೇಕು. ಹೊರಗೆ ಮುಕ್ತವಾಗಿ ಓಡಾಡಲು ಬಿಡಬಾರದು.

ಮನೆಯ ಹೊರಗಿನ ಜನರೊಂದಿಗೆ ಸಂವಹನ ನಡೆಸದಂತೆ ರಕ್ಷಿಸಬೇಕು. ಕನಿಷ್ಠ 6 ಅಡಿ ಅಂತರದಲ್ಲಿ ನಾಯಿಗಳಿಂದ ದೂರವಿರಬೇಕು. ಹೆಚ್ಚಿನ ಸಂಖ್ಯೆಯ ಜನರು ಸೇರುವ ಸಾರ್ವಜನಿಕ ಸ್ಥಳಗಳಿಗೆ ಪ್ರಾಣಿಗಳನ್ನು ಕರೆದುಕೊಂಡು ಹೋಗಬಾರದು. ಸಾಕು ಪ್ರಾಣಿಗಳಿಗೆ ಮುಖವಾಡ ಹಾಕಬೇಡಿ, ಮುಖವಾಡಗಳಿಂದ ಹಾನಿಯಾಗಬಹುದು. ಪ್ರಾಣಿಗಳ ಚರ್ಮ, ತುಪ್ಪಳ ಅಥವಾ ಕೂದಲಿನಿಂದ ಈ ವೈರಸ್ ಜನರಿಗೆ ಹರಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ನಿಮ್ಮ ಸಾಕುಪ್ರಾಣಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಸ್ಯಾನಿಟೈಸರ್ ಬಳಸಿ, ಪಶುವೈದ್ಯರ ಸಲಹೆಯನ್ನು ಪಡೆದುಕೊಳ್ಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...