alex Certify ಕರೆ ಮಾಡುವಾಗ ಕೊರೊನಾ ಕಾಲರ್ ಟ್ಯೂನ್ ಕಿರಿಕಿರಿ ತಪ್ಪಿಸಲು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರೆ ಮಾಡುವಾಗ ಕೊರೊನಾ ಕಾಲರ್ ಟ್ಯೂನ್ ಕಿರಿಕಿರಿ ತಪ್ಪಿಸಲು ಇಲ್ಲಿದೆ ಮಾಹಿತಿ

ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಕಾಲರ್ ಟ್ಯೂನ್ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ತುರ್ತಾಗಿ ಕರೆಮಾಡುವ ಸಂದರ್ಭದಲ್ಲಿಯೂ ಕಾಲರ್ ಟ್ಯೂನ್ ನಿಂದ ಹೆಚ್ಚಿನವರಿಗೆ ಕಿರಿಕಿರಿಯಾಗುತ್ತಿದೆ.

ಕಾಲರ್ ಟ್ಯೂನ್ ನಿಮ್ಮ ಮೊಬೈಲ್ ನಿಂದ ರಿಮೂವ್ ಮಾಡಲು ಈ ರೀತಿ ಮಾಡಬಹುದಾಗಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಇದರಲ್ಲಿ ಎಷ್ಟರಮಟ್ಟಿಗೆ ಯಶಸ್ಸು ಸಿಗುತ್ತದೆ ಎಂಬುದು ಗೊತ್ತಿಲ್ಲ. ಆದರೂ ಓದುಗರ ಮಾಹಿತಿಗಾಗಿ ಅದನ್ನು ಇಲ್ಲಿ ನೀಡಲಾಗಿದೆ. ಒಂದೊಮ್ಮೆ ನಿಮ್ಮಗಳಿಗೆ ಕೊರೊನಾ ಕಾಲರ್‌ ಟ್ಯೂನ್‌ ಹೋಗಲಾಡಿಸುವ ವಿಧಾನ ತಿಳಿದಿದ್ದರೆ ಆ ಮಾಹಿತಿಯನ್ನೂ ಹಂಚಿಕೊಳ್ಳಬಹುದು.

ಜಿಯೋ ಗ್ರಾಹಕರು STOP 155223 SMS ಮಾಡಿದಲ್ಲಿ ಕಾಲರ್ ಟ್ಯೂನ್ ರಿಮೂವ್ ಆಗಲಿದೆ.

ಏರ್ಟೆಲ್ ಗ್ರಾಹಕರು *646*224# ಡಯಲ್ ಮಾಡಿ 1ನ್ನು ಒತ್ತಬೇಕು.

ಬಿಎಸ್ಎನ್ಎಲ್ ಗ್ರಾಹಕರು UNSUB 56700 ಅಥವಾ 56799 ಎಸ್ಎಂಎಸ್ ಮಾಡಬಹುದು.

ಐಡಿಯಾ ಗ್ರಾಹಕರು STOP 155223 ಕರೆ ಅಥವಾ ಎಸ್ಎಮ್ಎಸ್ ಮಾಡಬಹುದಾಗಿದೆ.

ವೊಡಾಫೋನ್ ಗ್ರಾಹಕರು CANCT 144 ಎಸ್ಎಂಎಸ್ ಮಾಡಿದಲ್ಲಿ ಕಾಲರ್ ಟ್ಯೂನ್ ರಿಮೂವ್ ಆಗಲಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...