ಇಸ್ಪೀಟ್ ಆಡುವಾಗ ಸಿಕ್ಕಿಬಿದ್ದು ಬಂಧನಕ್ಕೊಳಗಾಗಿದ್ದ ಪಕ್ಷದ ಕಾರ್ಯಕರ್ತರನ್ನು ಬಿಡಿಸಲು ತಾನು ಬೆಳಗಿನ ಜಾವ 2 ಗಂಟೆಗೆ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾಗಿ ಮಧ್ಯಪ್ರದೇಶದ ಬಿಜೆಪಿ ಮುಖಂಡ ಕೈಲಾಸ್ ವಿಜಯ್ ವರ್ಗಿಯ ಅವರ ಮಾತಿನ ವಿಡಿಯೋ ಈಗ ವೈರಲ್ ಆಗಿದೆ.
‘ಯಾವುದೇ ಪಕ್ಷದ ಕಾರ್ಯಕರ್ತರು ಕರೆ ಮಾಡಿದರೂ ನಾನು ಉತ್ತರಿಸುತ್ತೇನೆ, ನಾನು ಕೋಲ್ಕತ್ತದಲ್ಲಿ ಇದ್ದಾಗ ಪಕ್ಷದ ಕಾರ್ಯಕರ್ತರು ಬೆಳಗ್ಗೆ 2 ಗಂಟೆಗೆ ಕರೆ ಮಾಡಿ ತಾವು ಇಸ್ಪೀಟ್ ಆಡುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ವಿಷಯ ಹೇಳುತ್ತಾರೆ. ನಂತರ ನಾನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಕರೆ ಮಾಡಿ, ನಮ್ಮಪಕ್ಷದ ಕಾರ್ಯಕರ್ತರು ಪರಿಶೀಲನೆ ಮಾಡಿ ಎಂದು ಹೇಳಿದ್ದೇನೆ’ ಎಂದು ವಿಜಯ್ ವರ್ಗಿಯ ಅವರು ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದರು.
ಇದರ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ಹೊಸ ಭಾರತದ ಕಲ್ಪನೆಯೆಂದು ಕಾಂಗ್ರೆಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಇದು ಯಾವ ಸೀಮೆಯ ಬಿಜೆಪಿ ಎಂದು ಅಲ್ಲಿನ ಕಾಂಗ್ರೆಸ್ ವಕ್ತಾರರು ಪ್ರಶ್ನಿಸಿದ್ದಾರೆ.
https://twitter.com/NarendraSaluja/status/1276780015749697537?ref_src=twsrc%5Etfw%7Ctwcamp%5Etweetembed%7Ctwterm%5E1276780015749697537%7Ctwgr%5E&ref_url=https%3A%2F%2Fwww.timesnownews.com%2Findia%2Farticle%2Fcall-police-stations-at-2-am-to-slugfest-over-bjp-leader-kailash-vijayvargiya-s-viral-video%2F613062