ನವದೆಹಲಿ: ಇನ್ನುಮುಂದೆ ಸರ್ಕಾರಿ ಉದ್ಯೋಗಗಳಿಗೆ ಒಂದೇ ನೇಮಕಾತಿ ಪ್ರಾಧಿಕಾರ ಇರಲಿದ್ದು ಒಂದೇ ಅರ್ಹತಾ ಪರೀಕ್ಷೆಯನ್ನು ನಡೆಸಲಾಗುವುದು.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ದೇಶದ ವಿವಿಧ ಉದ್ಯೋಗಗಳಿಗೆ ಒಂದೇ ಸಾಮಾನ್ಯ ಅರ್ಹತಾ ಪರೀಕ್ಷೆ ನಡೆಸಲು ಮತ್ತು ರಾಷ್ಟ್ರೀಯ ನೇಮಕಾತಿ ಪ್ರಾಧಿಕಾರ ರಚಿಸಲು ಅನುಮೋದನೆ ನೀಡಲಾಗಿದೆ.
ರಾಷ್ಟ್ರೀಯ ನೇಮಕಾತಿ ಪ್ರಾಧಿಕಾರ ಸ್ವಾಯತ್ತ ಸಂಸ್ಥೆಯಾಗಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗುವುದ. ಉದ್ಯೋಗಾಕಾಂಕ್ಷಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು. ಹಲವು ಸಲ ಉದ್ಯೋಗಕಾಂಕ್ಷಿಗಳು ಶುಲ್ಕ ಪಾವತಿಸುವುದು, ಅರ್ಜಿ ಸಲ್ಲಿಸುವುದು ಇವೇ ಮೊದಲಾದ ಪ್ರಕ್ರಿಯೆಗಳನ್ನು ಸರಳಗೊಳಿಸಿ ಪರೀಕ್ಷೆ ನಡೆಸಲಾಗುವುದು.
ಒಂದೇ ಸಲಕ್ಕೆ ಹಲವು ಕೆಲಸಗಳಿಗೆ ಅರ್ಜಿ ಸಲ್ಲಿಸಿ ಪರೀಕ್ಷೆ ನಡೆಯುವುದರಿಂದ ಅಭ್ಯರ್ಥಿಗಳು ಅವಕಾಶ ವಂಚಿತರಾಗುತ್ತಾರೆ. ಹಾಗಾಗಿ ಏಕರೂಪದ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುವುದು. ಗ್ರೂಪ್-ಬಿ, ಸಿ ಹಾಗೂ ನಾನ್ ಗೆಜೆಟೆಡ್ ಹುದ್ದೆಗಳಿಗೆ ಒಂದೇ ಪ್ರವೇಶ ಪರೀಕ್ಷೆಯನ್ನು ನಡೆಸಲಿದ್ದು, ಈ ಪರೀಕ್ಷೆಯಲ್ಲಿ ಪಾಸ್ ಆದವರಿಗೆ ಮುಂದಿನ ಹಂತದ ನೇಮಕಾತಿಗೆ ಅರ್ಹತೆ ನೀಡಲಾಗುವುದು ಎಂದು ಹೇಳಲಾಗಿದೆ.