ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಎಮ್ಮೆಯೊಂದು ದಾಳಿ ಮಾಡಿದ ಘಟನೆ ಉತ್ತರ ಪ್ರದೇಶದ ಸಂಭಾಲ್ನಲ್ಲಿ ಜರುಗಿದೆ.
ಹೆಸರು ತಿಳಿದುಬರದ ಅಧಿಕಾರಿಯೊಬ್ಬರು ತಮ್ಮ ಬೈಕ್ನಲ್ಲಿ ಪೊಲೀಸ್ ಠಾಣೆಗೆ ಆಗಮಿಸುತ್ತಿದ್ದ ವೇಳೆ ಎಮ್ಮೆಯು ಆತನ ಬೈಕ್ಗೆ ಗುದ್ದಿದೆ. ಬೈಕ್ನಿಂದ ಕೆಳಗೆ ಬಿದ್ದ ಅಧಿಕಾರಿಯನ್ನು ಎಮ್ಮೆಯು ಕಾಂಕ್ರೀಟ್ ನೆಲದ ಮೇಲೆ ಕೆಲ ಮೀಟರ್ಗಳಷ್ಟು ದೂರಕ್ಕೆ ಎಳೆದುಕೊಂಡು ಹೋಗಿದೆ.
ಇದೇ ಸಂದರ್ಭದಲ್ಲಿ, ಪಿಂಕ್ ಶರ್ಟ್ ಧರಿಸಿದ ವ್ಯಕ್ತಿಯೊಬ್ಬರು ಎಮ್ಮೆಯ ಗಮನವನ್ನು ಬೇರೆಡೆ ಸೆಳೆದು, ಅದನ್ನು ಪೊಲೀಸ್ ಠಾಣೆಯ ಅಂಗಳದಿಂದ ದೂರಕ್ಕೆ ಅಟ್ಟಿಸಿಕೊಂಡು ಹೋಗಿದ್ದಾರೆ.
ಅಧಿಕಾರಿ ಮೇಲೆ ದಾಳಿ ಮಾಡುವ ಮುನ್ನ ಎಮ್ಮೆಯು ಠಾಣೆಯ ಅಂಗಳದಲ್ಲಿದ್ದ ವಾಹನಗಳ ಮೇಲೆ ದಾಳಿ ಮಾಡಿದೆ.