ಕೊರೊನಾ ವೈರಸ್ ವಿಶ್ವದಾದ್ಯಂತ ಅನೇಕ ಬದಲಾವಣೆಗಳನ್ನು ತಂದಿದೆ. ಹಾಗೆ ಕೊರೊನಾ ದೇಶದ ಪರಿಸ್ಥಿತಿಯನ್ನು ಬದಲಿಸಿದೆ. ಕೊರೊನಾ ಕಾರಣಕ್ಕೆ ಬಜೆಟ್ ದಾಖಲೆಗಳನ್ನು ಈ ಬಾರಿ ಮುದ್ರಿಸಲು ಸಾಧ್ಯವಾಗ್ತಿಲ್ಲ. 1947 ರ ನಂತರ ಇದೇ ಮೊದಲ ಬಾರಿಗೆ ಬಜೆಟ್ ದಾಖಲೆಗಳನ್ನು ಮುದ್ರಿಸದಿರಲು ನಿರ್ಧರಿಸಲಾಗಿದೆ. ಲೋಕಸಭೆ ಮತ್ತು ರಾಜ್ಯಸಭಾ ಸಚಿವಾಲಯ ಈ ವರ್ಷದ ಬಜೆಟ್ ದಾಖಲೆಗಳ ಸಾಫ್ಟ್ ಕಾಪಿಯನ್ನು ಮಾತ್ರ ಬಳಸಲಿದೆ.
ನವೆಂಬರ್ 26,1947ರಂದು ಬಜೆಟ್ ದಾಖಲೆಗಳನ್ನು ಮೊದಲ ಬಾರಿ ಮುದ್ರಿಸಲಾಗಿತ್ತು. ಅಂದಿನಿಂದ ಪ್ರತಿ ವರ್ಷ ಬಜೆಟ್ ದಾಖಲೆಗಳನ್ನು ಮುದ್ರಿಸುತ್ತ ಬರಲಾಗಿದೆ. ಪ್ರತಿ ವರ್ಷ ಹಣಕಾಸು ಸಚಿವಾಲಯ ‘ಹಲ್ವಾ ಸಮಾರಂಭ’ ನಡೆಸುತ್ತದೆ. ಮುದ್ರಣದಲ್ಲಿ ಕೆಲಸ ಮಾಡುವ ನೌಕರರಿಗೂ ಹಲ್ವಾ ವಿತರಿಸಲಾಗುತ್ತದೆ.
ನಂತ್ರ ಬಜೆಟ್ ದಾಖಲೆಗಳನ್ನು ಮುದ್ರಿಸಲಾಗುತ್ತದೆ. ಈ ಕೆಲಸವನ್ನು ನಾರ್ತ್ ಬ್ಲಾಕ್‌ನ ನೆಲಮಾಳಿಗೆಯಲ್ಲಿ ಮಾಡಲಾಗುತ್ತದೆ. ಸಾಮಾನ್ಯವಾಗಿ ಸುಮಾರು 100 ಉದ್ಯೋಗಿಗಳು ಬಜೆಟ್ ದಾಖಲೆಗಳ ಮುದ್ರಣ ಪ್ರಕ್ರಿಯೆಯಲ್ಲಿ ತೊಡಗುತ್ತಾರೆ. ಸಂಪೂರ್ಣ ಮುದ್ರಣ ಪ್ರಕ್ರಿಯೆಯು ಸುಮಾರು 2 ವಾರ ತೆಗೆದುಕೊಳ್ಳುತ್ತದೆ. ಈ ವರ್ಷ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು 2021-22ರ ಹಣಕಾಸು ವರ್ಷದ ಬಜೆಟ್ ಮಂಡಿಸಲಿದ್ದಾರೆ.