
ಕೊರಿಯಾದ ಮ್ಯೂಸಿಕ್ ಬ್ಯಾಂಡ್ ಆದ BTSನ ಭಾರತದ ಅಭಿಮಾನಿಗಳು ಅಸ್ಸಾಂ ಪ್ರವಾಹದಿಂದ ತತ್ತರಿಸಿರುವ ಸಂತ್ರಸ್ತರ ನೆರವಿಗೆಂದು 5 ಲಕ್ಷ ರೂ.ಗಳನ್ನು ಕ್ರೋಢೀಕರಿಸಿದ್ದಾರೆ.
ಕೋವಿಡ್-19 ಸೋಂಕಿನ ಭೀತಿಯ ನಡುವೆಯೇ ಅಸ್ಸಾಂ ಅನ್ನು ಮುಳುಗಿಸಿರುವ ಪ್ರವಾಹದಿಂದಾಗಿ 71 ಜನ ಮೃತಪಟ್ಟಿದ್ದು, ರಾಜ್ಯದ 33 ಜಿಲ್ಲೆಗಳ ಪೈಕಿ 27 ಜಿಲ್ಲೆಗಳ ಮೇಲೆ ಪರಿಣಾಮ ಬೀರಿದೆ. 40 ಲಕ್ಷ ಜನರು ಪ್ರವಾಹದಿಂದ ತತ್ತರಿಸಿದ್ದಾರೆ.
ಇದೇ ವೇಳೆ, ಪ್ರವಾಹದಿಂದಾಗಿ ಕಾಜಿರಂಗ ರಾಷ್ಟ್ರೀಯ ಅಭಯಾರಣ್ಯದ 95% ಪ್ರದೇಶವು ನೀರಿನಿಂದ ಆವೃತವಾಗಿದ್ದು, 76 ವನ್ಯಜೀವಿಗಳು ಮೃತಪಟ್ಟಿದ್ದು ಕಂಡಿಬಂದಿದ್ದು, 121 ಪ್ರಾಣಿಗಳನ್ನು ರಕ್ಷಿಸಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಕಾಜಿರಂಗ ರಾಷ್ಟ್ರೀಯ ಅಭಯಾರಣ್ಯವು 2,200ಕ್ಕೂ ಹೆಚ್ಚು ಘೇಂಡಾಮೃಗಗಳಿಗೆ ತವರಾಗಿದೆ.
https://www.facebook.com/bhavanabarman/posts/3130163377076560