ನವದೆಹಲಿ: ದೇಶಾದ್ಯಂತ ರೂಪಾಂತರ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಮತ್ತೆ ನಾಲ್ವರಲ್ಲಿ ಹೊಸ ಪ್ರಭೇದದ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಈ ಮೂಲಕ ದೇಶದಲ್ಲಿ ರೂಪಾಂತರ ಕೊರೊನಾ ಸೋಂಕು ಪತ್ತೆಯಾದವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 6 ಕೆಸ್ ಪತ್ತೆಯಾಗಿದ್ದರೆ, ಶಿವಮೊಗ್ಗದಲ್ಲಿ ನಾಲ್ವರಲ್ಲಿ ಮ್ಯೂಟಂಟ್ ಕೊರೊನಾ ಪತ್ತೆಯಾಗಿದೆ. ಈ ಮೂಲಕ ಕರ್ನಾಟಕದಲ್ಲಿಯೇ 10 ಪ್ರಕರಣ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದಲ್ಲಿ 5, ಹೈದರಾಬಾದ್ ನಲ್ಲಿ 3 ಹಾಗೂ ಕೋಲ್ಕತ್ತಾದಲ್ಲಿ ಓರ್ವರಲ್ಲಿ ರೂಪಾಂತರ ಸೋಂಕು ಪತ್ತೆಯಾಗಿದೆ.