ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತಕ್ಕೆ ಪದಕಗಳ ಸುರಿಮಳೆಯಾಗುತ್ತಿದೆ. ಇಂದು ಮಹಿಳಾ ಕ್ಲಬ್ ಥ್ರೋ-ಎಫ್ ಸ್ಪರ್ಧೆಯಲ್ಲಿ ಭಾರತದ ಭಯನ್ ಏಕ್ತಾ ಹಾಗೂ ಪುರುಷರ ವಿಎಲ್ 2 ಸ್ಪರ್ಧೆಯಲ್ಲಿ ಗಜೇಂದ್ರ ಸಿಂಗ್ ಅವರು ಕಂಚಿನ ಪದಕ ಗೆದ್ದಿದ್ದಾರೆ.
ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಪುರುಷರ ವಿಎಲ್ 2 ಸ್ಪರ್ಧೆಯಲ್ಲಿ ಗಜೇಂದ್ರ ಸಿಂಗ್ 1:01.084 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದರು.
ಭಯನ್ ಏಕ್ತಾ ಮಹಿಳಾ ಕ್ಲಬ್ ಥ್ರೋ – ಎಫ್ 32/51 ಸ್ಪರ್ಧೆಯಲ್ಲಿ 21.66 ಮೀಟರ್ ಎಸೆಯುವ ಮೂಲಕ ಕಂಚಿನ ಪದಕವನ್ನು ಗೆದ್ದು, ಹೊಸ ದಾಖಲೆ ಬರೆದಿದ್ದಾರೆ.