ಹೈದರಾಬಾದ್: ತಮಿಳುನಾಡಿನಲ್ಲಿ ಅವಾಂತರಗಳನ್ನು ಸೃಷ್ಟಿಸುತ್ತಿರುವ ನಿವಾರ್ ಚಂಡಮಾರುತ ಆಂಧ್ರಪ್ರದೇಶ, ಕರ್ನಾಟಕದಲ್ಲೂ ಪರಿಣಾಮಗಳನ್ನು ಬೀರುತ್ತಿದ್ದು, ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ನಿವಾರ್ ಎಫೆಕ್ಟ್ ನಿಂದಾಗಿ ತಿರುಮಲದಲ್ಲಿ ಗುಡ್ಡ ಕುಸಿತವುಂಟಾಗುತ್ತಿದ್ದು, ವಾಹನಗಳ ಮೇಲೆ ಬೃಹತ್ ಬಂಡೆಗಳು ಉರುಳಿಬೀಳುತ್ತಿವೆ.
ನಿವಾರ್ ಚಂಡಮಾರುತದಿಂದಾಗಿ ಆಂಧ್ರಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ತಿರುಮಲದಲ್ಲಿ ಗುಡ್ಡ ಕುಸಿತವುಂಟಾಗುತ್ತಿದೆ. ತಿರುಪತಿಯಿಂದ ತಿರುಮಲಕ್ಕೆ ಹೋಗುವ ಮಾರ್ಗಮಧ್ಯೆ ಬೃಹತ್ ಬಂಡೆಗಳು, ಮರಗಳು ಧರೆಶಾಹಿಯಾಗಿದ್ದು, ವಾಹನಗಳ ಮೇಲೆ ಬಂಡೆಗಳು ಉರುಳಿ ಬೀಳುತ್ತಿವೆ. ತಿರುಮಲಕ್ಕೆ ತೆರಳುತ್ತಿದ್ದ ಕಾರಿನ ಮೇಲೆ ಗುಡ್ಡ ಕುಸಿದು ಬಿದ್ದಿದೆ. ತಿರುಮಲ ತಿರುಪತಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಇನ್ನು ನಿವಾರ್ ಚಂಡಮಾರುತದಿಂದಾಗಿ ಆಂಧ್ರದ ಚಿತ್ತೂರು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ವರದಯ್ಯಪಾಲೆಂ ಜಲಾವೃತಗೊಂಡಿದೆ. 8 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.