ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್ – ಜೆಇಇ) ಬರೆಯುವುದಕ್ಕಾಗಿ ಅಪ್ಪ-ಮಗ ಇಬ್ಬರೂ ಬರೋಬ್ಬರಿ 75 ಕಿ.ಮೀ. ಸೈಕಲ್ ಹೊಡೆದಿದ್ದಾರೆ.
ಕೋಲ್ಕತ್ತಾದ 19 ವರ್ಷದ ದಿಗಂತ ಮಂಡಲ್ ಪರೀಕ್ಷೆ ಬರೆಯುವುದಕ್ಕಾಗಿ ತಂದೆಯೂ ಸಾಥ್ ನೀಡಿದ್ದು, 75 ಕಿ.ಮೀ. ದೂರದ ಪರೀಕ್ಷಾ ಕೇಂದ್ರವನ್ನು ಸೈಕಲ್ ತುಳಿದು ತಲುಪಿದ್ದಾರೆ.
ಒಂದೆಡೆ ಕೊರೋನಾ ಸೋಂಕು, ಇನ್ನೊಂದೆಡೆ ಅತಿವೃಷ್ಟಿಯಿಂದ ಪ್ರವಾಹ ಪರಿಸ್ಥಿತಿ, ಮತ್ತೊಂದೆಡೆ ಸಾರ್ವಜನಿಕ ಸಾರಿಗೆ ಕೊರತೆ. ಈ ಎಲ್ಲ ಕೊರತೆ ನಡುವೆ ನೀಟ್ ಗಾಗಿ ತಯಾರಿ ನಡೆಸಿ ಆಸೆಕಣ್ಣುಗಳಿಂದ ಕಾಯುತ್ತಿದ್ದ ದಿಗಂತ್.
ಯಾವುದಕ್ಕೂ ಜಗ್ಗದ ದಿಗಂತ್ ಹಾಗೂ ವೃತ್ತಿಯಲ್ಲಿ ಬಡಗಿಯಾಗಿರುವ ಆತನ ತಂದೆ ರಬಿ, ಪ್ರತ್ಯೇಕ ಸೈಕಲ್ ಗಳಲ್ಲಿ ಮಂಗಳವಾರ ಸಂಜೆ ಸುಂದರಬನದ ಗೋಸಬ ಪ್ರದೇಶದಿಂದ ಹೊರಟಿದ್ದಾರೆ. ತೆಪ್ಪದ ಮೂಲಕ ಬಿದ್ಯಾಬ್ಧಾರಿ ನದಿ ದಾಟಿ, ಅಲ್ಲಿಂದ ಸುಮಾರು 4 ಗಂಟೆಗಳ ಕಾಲ ಸೈಕಲ್ ನಲ್ಲಿ ಸಾಗಿ ಪಿಯಾಲಿ ಎಂಬ ಹಳ್ಳಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ರಾತ್ರಿ ಉಳಿದಿದ್ದಾರೆ.
ಬುಧವಾರ ಮುಂಜಾನೆ ತನ್ನ ಸೈಕಲ್ ಬಿಟ್ಟು, ತಂದೆಯ ಸೈಕಲ್ ಏರಿ ಹಿಂದೆ ಕುಳಿತು ಓದಿಕೊಂಡು ಹೋದ ದಿಗಂತ್, ಬೆಳಗ್ಗೆ 9 ಗಂಟೆ ವೇಳೆಗೆ ಸೋನಾರ್ ಪುರ ತಲುಪಿ, ಅಲ್ಲಿಂದ ಆಟೋರಿಕ್ಷಾ ಹಿಡಿದು 11 ಗಂಟೆ ಹೊತ್ತಿಗೆ ಪರೀಕ್ಷಾ ತಲುಪಿದರು.