ಹೈದರಾಬಾದ್‌ನಿಂದ ಮರಳಿದ್ದ ಮೂವರು ವಲಸೆ ಕಾರ್ಮಿಕರನ್ನು ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ನರೈನ್‌ಪುರ ಎಂಬ ಊರಿನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಸುಮ್ಮನೇ ಬರೀ ಉಂಡು-ಮಲಗಿ ಕಾಲ ಕಳೆದು ಬೋರಾದಾಗ ಈ ಮೂವರು ಕಾರ್ಮಿಕರು ಮಾಡಿದ್ದೇನು ಗೊತ್ತೇ? ಅವರು ಕ್ವಾರಂಟೈನ್ ಆಗಿದ್ದ ಶಾಲೆಯ ಗೋಡೆಗಳಿಗೆ ಬಣ್ಣ ಬಳಿಯುವ ಕೆಲಸಕ್ಕೆ ಇಳಿದು ಇದೀಗ ಇಡೀ ಶಾಲೆಗೇ ಸಂಪೂರ್ಣ ಹೊಸ ಲುಕ್ ಕೊಟ್ಟುಬಿಟ್ಟಿದ್ದಾರೆ.
ವಿನೋದ್, ಅರುಣ ಹಾಗೂ ಕಮಲೇಶ್ ಎಂಬ ಈ ಕಾರ್ಮಿಕರು ಹೈದರಾಬಾದ್‌ನಲ್ಲಿ ಪೇಂಟರ್‌ಗಳಾಗಿ ಕೆಲಸ ಮಾಡಿಕೊಂಡಿದ್ದರು. ಇದೀಗ ಕೊರೋನಾ ಲಾಕ್‌ಡೌನ್ ಇರುವ ಕಾರಣದಿಂದ ತಂತಮ್ಮ ಊರುಗಳಿಗೆ ಮರಳಿ ಹೋಗುತ್ತಿದ್ದಾರೆ.
ಈ ಊರಿನ ಸರ್ಪಂಚರನ್ನು ವಿನಂತಿಸಿಕೊಂಡು ಪೇಂಟ್ ಹಾಗೂ ಬ್ರಷ್‌ಗಳನ್ನು ತೆಗೆಸಿಕೊಂಡು ತಮ್ಮೀ ಕ್ವಾರಂಟೈನ್ ಅವಧಿಯಲ್ಲಿ ಶಾಲೆಗೊಂದು ಮೇಕ್ ಓವರ್ ಕೊಟ್ಟುಬಿಟ್ಟಿದ್ದಾರೆ ಈ ಮೂವರು.