ದೇಶದಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿದೆ. ಈ ಮಧ್ಯೆ ಕೋವಿಡ್ -19 ನಿಂದ ಚೇತರಿಸಿಕೊಳ್ಳುತ್ತಿದ್ದವರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಬ್ಲ್ಯಾಕ್ ಫಂಗಸ್ ಅಪಾಯ ಹೆಚ್ಚಾಗಿದೆ. ಗುಜರಾತ್‌ನಲ್ಲಿ ಅತಿ ಹೆಚ್ಚು ಮ್ಯೂಕೋರಮೈಕೋಸಿಸ್ ಪ್ರಕರಣಗಳು ವರದಿಯಾಗಿವೆ. ಇದಲ್ಲದೆ ಇದು ಮಹಾರಾಷ್ಟ್ರ, ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ಕರ್ನಾಟಕ, ತೆಲಂಗಾಣ, ಉತ್ತರ ಪ್ರದೇಶ, ಬಿಹಾರ ಮತ್ತು ಹರಿಯಾಣದಲ್ಲೂ ಪ್ರಕರಣ ದಾಖಲಾಗಿದೆ.
ಬ್ಲ್ಯಾಕ್ ಫಂಗಸ್ ಅತ್ಯಂತ ಅಪರೂಪದ ಸೋಂಕು. ಇದು ಸಾಮಾನ್ಯವಾಗಿ ಮಣ್ಣು, ಸಸ್ಯಗಳು, ಗೊಬ್ಬರ, ಕೊಳೆತ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಬೆಳೆಯುವ ಲೋಳೆಯ ಶಿಲೀಂಧ್ರದಿಂದ ಉಂಟಾಗುತ್ತದೆ. ಎನ್ಐಟಿಐ ಆಯೋಗದ ಸದಸ್ಯ ವಿ.ಕೆ.ಪಾಲ್ ಪ್ರಕಾರ, ಕೋವಿಡ್ -19 ರ ಅನೇಕ ರೋಗಿಗಳಲ್ಲಿ ಬ್ಲ್ಯಾಂಕ್ ಫಂಗಸ್ ಸೋಂಕು ಕಂಡುಬಂದಿದೆ. ಈ ಶಿಲೀಂಧ್ರ ಹೆಚ್ಚಾಗಿ ಆರ್ದ್ರ ಮೇಲ್ಮೈಯಲ್ಲಿರುತ್ತದೆ.
ಮೂಗಿನ ದಟ್ಟಣೆ, ಮೂಗು ಮತ್ತು ಕಣ್ಣುಗಳ ಸುತ್ತ ನೋವು ಮತ್ತು ಕಣ್ಣ ಕೆಂಪಾಗುವುದು. ಜ್ವರ, ತಲೆನೋವು, ಕೆಮ್ಮು, ಉಸಿರಾಟದ ತೊಂದರೆ, ರಕ್ತ ವಾಂತಿ, ಮಾನಸಿಕವಾಗಿ ಅನಾರೋಗ್ಯ ಮತ್ತು ಗೊಂದಲ ಇದ್ರ ಲಕ್ಷಣವಾಗಿದೆ.ಇದು ಸಕ್ಕರೆ ಕಾಯಿಲೆ ಹೊಂದಿರುವ ಕೊರೊನಾ ರೋಗಿಗಳ ಮೇಲೆ ದಾಳಿ ನಡೆಸುತ್ತಿದೆ. ಇದು ಅಂತಹ ಗಂಭೀರ ಕಾಯಿಲೆಯಾಗಿದ್ದು, ರೋಗಿಗಳನ್ನು ನೇರವಾಗಿ ಐಸಿಯುಗೆ ಸೇರಿಸಬೇಕು.
ಕೊರೊನಾ ವೈರಸ್‌ನಿಂದ ಚೇತರಿಸಿಕೊಳ್ಳುವ ಜನರು ಹೈಪರ್ಗ್ಲೈಸೀಮಿಯಾವನ್ನು ನಿಯಂತ್ರಿಸಬೇಕಾಗುತ್ತದೆ. ಮಧುಮೇಹ ರೋಗಿಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಪರೀಕ್ಷಿಸಬೇಕು. ಸ್ಟೀರಾಯ್ಡ್ ಗಳನ್ನು ತೆಗೆದುಕೊಳ್ಳುವಾಗ, ಸರಿಯಾದ ಸಮಯ, ಸರಿಯಾದ ಡೋಸೇಜ್ ಮತ್ತು ಅವಧಿಯನ್ನು ನೆನಪಿನಲ್ಲಿಡಿ. ಸ್ಟೀಮ್ ತೆಗೆದುಕೊಳ್ಳುವ ವೇಳೆ ಶುದ್ಧ ನೀರನ್ನು ಬಳಸಿ. ಆಂಟಿ ಬಯೋಟಿಕ್ ಹಾಗೂ ಆಂಟಿ ಫಂಗಲ್ಸ್ ಬಳಸುವಾಗಲೂ ಎಚ್ಚರ ವಹಿಸಿ.
ಮೂಗು ಕಟ್ಟುವುದನ್ನು ನಿರ್ಲಕ್ಷಿಸಬೇಡಿ. ಇದ್ರ ಲಕ್ಷಣ ಕಾಣಿಸಿಕೊಳ್ತಿದ್ದಂತೆ ತಕ್ಷಣ ವೈದ್ಯರನ್ನು ಭೇಟಿಯಾಗಿ. ಮನೆಯಲ್ಲಿಯೇ ಚಿಕಿತ್ಸೆ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಡಿ. ಕೊರೊನಾದಿಂದ ಚೇತರಿಸಿಕೊಂಡವರು ಸ್ವಚ್ಛತೆ ಬಗ್ಗೆ ಗಮನ ನೀಡಬೇಕು. ಪ್ರತಿ ದಿನ ಸ್ನಾನ ಮಾಡಬೇಕು. ಮಣ್ಣಿನ ಬಳಕೆ ವೇಳೆ ಮಾಸ್ಕ್ ಧರಿಸಬೇಕು. ಕೆಲಸ ಮಾಡುವ ವೇಳೆ ಉದ್ದವಾದ ಶರ್ಟ್, ಬೂಟ್ ಧರಿಸಿ.