ಭಾರತದಲ್ಲಿ ಕೊರೊನಾ ಮಧ್ಯೆ ಬ್ಲಾಕ್ ಫಂಗಸ್ ಕಾಟ ಹೆಚ್ಚಾಗಿದೆ. ಎರಡನೇ ಹಂತದಲ್ಲಿ ಬ್ಲಾಕ್ ಫಂಗಸ್ ರೋಗಿಗಳ ಸಂಖ್ಯೆ ಹೆಚ್ಚಾಗ್ತಿದೆ. ಈವರೆಗೆ 5000ಕ್ಕೂ ಹೆಚ್ಚು ಮಂದಿಗೆ ಬ್ಲಾಕ್ ಫಂಗಸ್ ಕಾಡಿದೆ. ಗುಜರಾತ್ ನಲ್ಲಿ ಬ್ಲಾಕ್ ಫಂಗಸ್ ರೋಗಿಗಳ ಸಂಖ್ಯೆ ಏರುತ್ತಿದೆ. ಕಳೆದ ಐದು ತಿಂಗಳಿಂದ ವ್ಯಕ್ತಿಯೊಬ್ಬ ಬ್ಲಾಕ್ ಫಂಗಸ್ ವಿರುದ್ಧ ಹೋರಾಡುತ್ತಿದ್ದಾನೆ.
ರಾಜ್‌ಕೋಟ್ ನಿವಾಸಿ ವಿಮಲ್ ದೋಶಿ ಎಂಬಾತನಿಗೆ ಮೊದಲು ಕೊರೊನಾ ಕಾಣಿಸಿಕೊಂಡಿತ್ತು. 15 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. ಆಕ್ಸಿಜನ್ ಜೊತೆ ಸ್ಟಿರಾಯ್ಡ್ ನೀಡಲಾಗಿತ್ತು. ಕೊರೊನಾ ಗೆದ್ದವನಿಗೆ ಬ್ಲಾಕ್ ಫಂಗಸ್ ಕಾಣಿಸಿಕೊಂಡಿದೆ. ಫಂಗಸ್ ಮೂಗಿನಲ್ಲಿದೆ ಎಂಬ ಕಾರಣಕ್ಕೆ ಅಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದ್ರೆ ಅದು ಅಲ್ಲಿಗೆ ನಿಲ್ಲಲಿಲ್ಲ. 5 ತಿಂಗಳಲ್ಲಿ ವಿಮಲ್ ದೋಶಿಗೆ 5 ಶಸ್ತ್ರಚಿಕಿತ್ಸೆ ನಡೆದಿದೆ. ಈಗ ಆರನೇ ಶಸ್ತ್ರಚಿಕಿತ್ಸೆಗೆ ತಯಾರಿ ನಡೆದಿದೆ.
ಈಗಾಗಲೇ ವಿಮಲ್ 39 ಇಂಜೆಕ್ಷನ್ ಪಡೆದಿದ್ದಾನೆ. ಆತನ ಚಿಕಿತ್ಸೆಗೆ 41 ಲಕ್ಷ ಖರ್ಚಾಗಿದೆ. ಮನೆ ಮಾರಾಟ ಮಾಡಿ ಹಣ ನೀಡಲಾಗಿದೆ. ಇನ್ನೂ 10-15 ಲಕ್ಷ ಬೇಕೆಂದು ಆತನ ಪತ್ನಿ ಹೇಳಿದ್ದಾರೆ. ಇನ್ಫೆಕ್ಷನ್ ಹೆಚ್ಚಾಗಿದ್ದು, ವಿಮಲ್ ಬದುಕಿದ್ದು ಮಿರಾಕಲ್ ಎನ್ನುತ್ತಿದ್ದಾರೆ ವೈದ್ಯರು.