ಕೋವಿಡ್-19 ಸೋಂಕಿನ ಭೀತಿ ಒಂದೆಡೆಯಾದರೆ ಬ್ಲಾಕ್ ಫಂಗಸ್‌ನದ್ದು ಮತ್ತೊಂದು ದೊಡ್ಡ ಭಯ ಜನರ ಮನದಲ್ಲಿ ಆವರಿಸಿದೆ. ದೇಶದಲ್ಲಿ ಆರೋಗ್ಯ ಸಂಬಂಧ ಹೊಸ ಸವಾಲನ್ನೇ ಸೃಷ್ಟಿ ಮಾಡಿರುವ ಈ ಬ್ಲಾಕ್ ಫಂಗಸ್‌ನಿಂದ 11,000ಕ್ಕೂ ಹೆಚ್ಚು ಜನರು ನರಳುತ್ತಿದ್ದಾರೆ.
ಕೊರೋನಾ ವೈರಸ್ ಸೋಂಕಿನ ಎರಡನೇ ಅಲೆಯ ವೇಳೆ ಹೆಚ್ಚಾಗಿ ಕೇಳಿ ಬರುತ್ತಿರುವ ಈ ಬ್ಲಾಕ್ ಫಂಗಸ್ ಮಿತಿಮೀರಿದ ಸ್ಟೆರಾಯ್ಡ್ ಬಳಕೆ ಹಾಗೂ ಕೋವಿಡ್ ಸೋಂಕಿತರಲ್ಲಿ ಅನಿಯಂತ್ರಿತ ಮಧುಮೇಹವಿದ್ದಲ್ಲಿ ಕಂಡುಬರುತ್ತದೆ.
ಕೋವಿಡ್-19 ಸೋಂಕಿತರಿಗೆ ಶುಶ್ರೂಷೆ ಮಾಡಲು ಸತುವಿನ ಬಳಕೆಯನ್ನು ನಿಲ್ಲಿಸಬೇಕೆಂದು ತಜ್ಞರು ಸೂಚಿಸುತ್ತಿದ್ದಾರೆ. ಸತುವಿನ ಬಳಕೆಯಿಂದ ಮ್ಯೂಕ್ರೋಮೈಕೋಸಿಸ್ ಅಥವಾ ಬ್ಲಾಕ್ ಫಂಗಸ್ ಬರುವ ಸಾಧ್ಯತೆ ಹೆಚ್ಚು ಎಂಬುದು ತಜ್ಞರ ಅಭಿಪ್ರಾಯ.
ಈ ಬಗ್ಗೆ ಟ್ವೀಟ್ ಮಾಡಿರುವ ಭಾರತೀಯ ವೈದ್ಯಕೀಯ ಸಂಘಟನೆಯ ಮಾಜಿ ಅಧ್ಯಕ್ಷ ರಾಜೀವ್ ಜಯದೇವನ್ ಕೊರೋನಾ ವೈರಸ್‌ಗೆ ಚಿಕಿತ್ಸೆ ನೀಡಲು ಅತಿಯಾದ ಹಬೆ, ಸತುವಿನ ಬಳಕೆ ಹಾಗೂ ಆಂಟಿಬಯಾಟಿಕ್ಸ್‌ನ ಮಿಶ್ರಣಗಳಿಂದ ಬ್ಲಾಕ್ ಫಂಗಸ್ ಹೆಚ್ಚಾಗಿರಬಹುದು ಎಂದಿದ್ದಾರೆ.
ಭಾರತದಲ್ಲಿ ತನ್ನ ಸಿಬ್ಬಂದಿಯ ಸುರಕ್ಷತೆ ಬಗ್ಗೆ ʼಟ್ವಿಟರ್ʼ ಆತಂಕ
ಅಜಿತ್ರೋಮೈಸಿನ್, ಡಾಕ್ಸಿಸೈಕ್ಲಿನ್ ಹಾಗೂ ಕಾರ್ಬಾಪೇನಮ್ ಆಂಟಿಬಯಾಟಿಕ್‌ಗಳ ಕಾಕ್‌ಟೇಲ್ ಬಳಕೆಯಿಂದ ಬ್ಲಾಕ್ ಫಂಗಲ್ ಸೋಂಕು ತಗುಲುವ ಸಾಧ್ಯತೆ ಹೆಚ್ಚಿದೆ ಎಂದು ಜಯದೇವನ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಕೋವಿಡ್ ಸೋಂಕಿತರ ಪೈಕಿ 80%ರಷ್ಟು ಮಂದಿಗೆ ದೇಹದ ತಾಪಮಾನ ನಿಯಂತ್ರಿಸಲು ಪ್ಯಾರಾಸೆಟಮಾಲ್ ಬಳಸಲು ತಿಳಿಸಿದ್ದು, ಇದರೊಂದಿಗೆ ಆಂಟಿಬಯಾಟಿಕ್ಸ್‌ಯುಕ್ತ 5-7 ಇತರೆ ಮದ್ದುಗಳನ್ನು ಸಹ ತೆಗೆದುಕೊಳ್ಳಲು ಸೂಚಿಸಲಾಗುತ್ತಿದ್ದು, ಪ್ರತಿನಿತ್ಯ 2-3 ಬಾರಿ ಹಬೆಯನ್ನು ತೆಗೆದುಕೊಳ್ಳಲೂ ಸೂಚಿಸಲಾಗುತ್ತಿದೆ.
ಕೋವಿಡ್ ನಿರ್ಬಂಧ ತಪ್ಪಿಸಲು 2 ರಾಜ್ಯಗಳ ಸಂಪರ್ಕಿಸುವ ಸೇತುವೆ ಮೇಲೆ ಮದುವೆ ಮಾಡಿಕೊಂಡ ನವಜೋಡಿ
ಸತುವಿನ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳುವ ಮೂಲಕ ದೇಹದ ರೋಗ ನಿರೋಧಕ ಶಕ್ತಿ ವರ್ಧಿಸಿಕೊಳ್ಳಲು ಸೂಚಿಸಲಾಗುತ್ತಿದ್ದು, ಇದರಿಂದಾಗಿ, ರೋಗನಿರೋಧಕ ಶಕ್ತಿ ಸೇರಿ ದೇಹದಲ್ಲಿ 300ಕ್ಕೂ ಅಧಿಕ ಎಂಜೈಮ್‌ಗಳು ಸಕ್ರಿಯಗೊಂಡು ವಿವಿಧ ಕಾರ್ಯಗಳನ್ನು ನಡೆಸಲು ಅನುವು ಮಾಡಿಕೊಡುತ್ತವೆ.
ಹಬೆ ಥೆರಪಿಯಿಂದ ಉಸಿರಾಟದ ಸಮಸ್ಯೆಗಳನ್ನು ಶಮನಗೊಳಿಸಬಹುದಾಗಿದೆ. ಆದರೆ ನ್ಯೂಮೋನಿಯಾ ಅಥವಾ ಶ್ವಾಸಕೋಶ ಸಂಬಂಧಿ ಯಾವುದೇ ತೊಂದರೆ ಇದ್ದವರಿಗೆ ಇದರಿಂದ ಯಾವುದೇ ಸಹಾಯವಾಗದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೃತಕ ಆಮ್ಲಜನಕ ಪೂರೈಕೆಯಿಂದಲೂ ಸಹ ಬ್ಲಾಕ್ ಫಂಗಸ್ ಪ್ರಕರಣಗಳು ದೇಶಾದ್ಯಂತ ಹೆಚ್ಚುತ್ತಿವೆ ಎನ್ನಲಾಗಿದೆ.