
ಬಿಜೆಪಿ ನಾಯಕ ರವಿ ಕಿಶನ್ಗೆ ವೇದಿಕೆಯ ಮೇಲೆ ಕೇಸರಿ ಬಣ್ಣದ ಶಾಲು ಹಾಕಿ ಸನ್ಮಾನಿಸಲಾಗಿತ್ತು. ಸನ್ಮಾನ ಸ್ವೀಕರಿಸಿದ ಬಳಿಕ ಇನ್ನೇನು ಕುರ್ಚಿ ಮೇಲೆ ಕೂರಬೇಕು ಅನ್ನೋವಷ್ಟರಲ್ಲಿ ಬಿದ್ದಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.
ಕಳೆದ ತಿಂಗಳು ಬಾಬಾ ರಾಮದೇವ್ ಆನೆ ಮೇಲೆ ಕೂತು ಯೋಗ ಮಾಡಲು ಹೋಗಿ ಬಿದ್ದ ದೃಶ್ಯವೂ ಸಹ ಇದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.