ಕೇರಳದ ಏಕೈಕ ಬಿಜೆಪಿ ಶಾಸಕ, ನಾಲ್ಕು ವರ್ಷಗಳ ಹಿಂದೆ ಕೇರಳದಲ್ಲಿ ಬಿಜೆಪಿಗೆ ಚೊಚ್ಚಲ ಗೆಲುವು ತಂದುಕೊಟ್ಟ ನಾಯಕ ರಾಜಗೋಪಾಲ್ ಕೇಂದ್ರದ ಕೃಷಿ ಮಸೂದೆಯನ್ನ ವಿರೋಧಿಸುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.
ಕೇರಳದ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಕೇಂದ್ರದ ಕೃಷಿ ಮಸೂದೆ ವಿರುದ್ಧ ಕೈಗೊಂಡ ನಿರ್ಣಯಕ್ಕೆ ಬಿಜೆಪಿ ಶಾಸಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕೇರಳ ವಿಧಾನಸಭೆ ಅಧಿವೇಶನದಲ್ಲಿ ಕೃಷಿ ಮಸೂದೆ ವಿರುದ್ಧ ಕೈಗೊಂಡ ನಿರ್ಣಯವನ್ನ ಒಮ್ಮತದಿಂದ ಅಂಗೀಕರಿಸಲಾಗಿದೆ. ಇನ್ನು ಈ ವಿಚಾರವಾಗಿ ಮಾತನಾಡಿದ ರಾಜಗೋಪಾಲ್, ಈ ನಿರ್ಣಯವನ್ನ ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
ಕೇಂದ್ರ ಕೃಷಿ ಮಸೂದೆಗೆ ನನ್ನ ವಿರೋಧವಿದೆ. ಹೀಗಾಗಿ ನಾನು ಕೇರಳ ಸರ್ಕಾರದ ನಿರ್ಧಾರವನ್ನ ಬೆಂಬಲಿಸಿದ್ದೇನೆ ಎಂದು ಹೇಳಿದ್ರು. ಅಲ್ಲದೇ ರೈತರ ಮನವಿಗೆ ಸ್ಪಂದಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಅಂತಾನೂ ಹೇಳಿದ್ರು.