ನವದೆಹಲಿ: ವಿಧಾನಸಭೆ ಚುನಾವಣೆ ನಡೆದ 5 ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ.
ಮತ ಎಣಿಕೆ ಮುಂದುವರೆದಿದ್ದು, ಉತ್ತರಪ್ರದೇಶ, ಗೋವಾ ಮತ್ತು ಉತ್ತರಾಖಂಡ್ ನಲ್ಲಿ ಬಿಜೆಪಿ ಮುನ್ನಡೆ ಗಳಿಸಿದ್ದು, ಮಣಿಪುರದಲ್ಲಿ ಕೂಡ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಗಳಿಸಿದ್ದಾರೆ.
ಪಂಜಾಬ್ ನಲ್ಲಿ ಮಾತ್ರ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ. ಪಂಜಾಬ್ ನಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗವಾಗಿದೆ. ಆಂತರಿಕ ಕಲಹದಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಸಿಎಂ ಚನ್ನಿ, ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹಿನ್ನಡೆ ಗಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಒಟ್ಟು 403 ಸ್ಥಾನಗಳಲ್ಲಿ ಮ್ಯಾಜಿಕ್ ನಂಬರ್ 202; ಬಿಜೆಪಿ 228, ಸಮಾಜವಾದಿ 99, ಕಾಂಗ್ರೆಸ್ 3, ಇತರರು 4 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದ್ದಾರೆ
ಉತ್ತರಾಖಂಡ್ ನ 70 ಕ್ಷೇತ್ರಗಳಲ್ಲಿ ಮ್ಯಾಜಿಕ್ ನಂಬರ್ 36; ಬಿಜೆಪಿ 43, ಕಾಂಗ್ರೆಸ್ 19, ಇತರರು 5 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಮಣಿಪುರದ 60 ಕ್ಷೇತ್ರಗಳಲ್ಲಿ ಮ್ಯಾಜಿಕ್ ನಂಬರ್ 31: ಬಿಜೆಪಿ 27, ಕಾಂಗ್ರೆಸ್ 18, ಇತರರು 9 ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದ್ದಾರೆ.
ಗೋವಾದ 40 ಕ್ಷೇತ್ರಗಳಲ್ಲಿ ಮ್ಯಾಜಿಕ್ ನಂಬರ್ 21 ಆಗಿದ್ದು, ಬಿಜೆಪಿ 21, ಕಾಂಗ್ರೆಸ್ 11, ಆಮ್ ಆದ್ಮಿ 1, ಇತರರು 7 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದ್ದಾರೆ.
ಪಂಜಾಬ್ 117 ಕ್ಷೇತ್ರಗಳಲ್ಲಿ ಮ್ಯಾಜಿಕ್ ನಂಬರ್ 59 ಆಗಿದ್ದು, ಆಮ್ ಆದ್ಮಿ 84, ಕಾಂಗ್ರೆಸ್ 22, SAD 8, ಬಿಜೆಪಿ 3 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ.