ಉತ್ತರ ಪ್ರದೇಶದ ಔರಿಯಾ ಕ್ಷೇತ್ರದ ಬಿಜೆಪಿ ಶಾಸಕ ಮೀರತ್ನ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾದಿಂದ ಸಾವಿಗೀಡಾಗಿದ್ದಾರೆ. 56 ವರ್ಷದ ಶಾಸಕ ರಮೇಶ್ ದಿವಾಕರ್ ಮೃತ ಸೋಂಕಿತರಾಗಿದ್ದಾರೆ. ರಮೇಶ್ ಅವರ ಪತ್ನಿ ಹಾಗೂ ಪುತ್ರನ ಸ್ಥಿತಿ ಕೂಡ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಈ ವಿಚಾರವಾಗಿ ಮಾತನಾಡಿದ ರಮೇಶ್ ಸೋದರಳಿಯ ದೀಪಕ್ ದಿವಾಕರ್, ನನ್ನ ಮಾವ, ಅವರ ಪತ್ನಿ ಹಾಗೂ ಪುತ್ರ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಮೊದಲು ನಾವು ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದೆವು. ಅಲ್ಲಿಂದ ಮೂವರನ್ನ ಕಾನ್ಪುರಕ್ಕೆ ಶಿಫ್ಟ್ ಮಾಡಲಾಯ್ತು. ಆದರೆ ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆಯಿಲ್ಲದ ಕಾರಣ ಅವರ ಪರಿಸ್ಥಿತಿ ಗಂಭೀರವಾಗುತ್ತಲೇ ಹೋಯ್ತು. ಇದಾದ ಬಳಿಕ ರಮೇಶ್ರನ್ನ ಘಾಜಿಯಾಬಾದ್ ಬಳಿಕ ಮೀರತ್ನಲ್ಲಿ ದಾಖಲು ಮಾಡಲಾಗಿತ್ತು ಎಂದು ಹೇಳಿದ್ರು.
ಮೀರತ್ನ ಲಾಲಾ ಲಜಪತ್ ರಾಯ್ ಮೆಮೊರಿಯಲ್ ಕಾಲೇಜಿನಲ್ಲಿ ರಮೇಶ್ರನ್ನ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಮೇಶ್ ಸಾವನ್ನಪ್ಪಿದ್ದಾರೆ.
ಇತ್ತ ರಮೇಶ್ ಸಹೋದರ ಲಾಲ್ ಜಿ ದಿವಾಕರ್ ಕೂಡ ಇದೇ ವಿಚಾರವಾಗಿ ಮಾತನಾಡಿ, ಕಾನ್ಪುರದಲ್ಲಿ ರಮೇಶ್ಗೆ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ಹೀಗಾಗಿ ಅವರನ್ನ ವಾಪಸ್ ಔರಿಯಾಗೆ ತಂದು ಆಕ್ಸಿಜನ್ ವ್ಯವಸ್ಥೆ ಮಾಡಲಾಗಿತ್ತು . ಆದರೆ ರಮೇಶ್ ಸ್ಥಿತಿ ಸುಧಾರಿಸದ ಕಾರಣ ಮತ್ತೆ ಘಾಜಿಯಾಬಾದ್ಗೆ ಸೇರಿಸಲಾಯ್ತು. ಅಲ್ಲೂ ಸಹ ರಮೇಶ್ಗೆ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ಕೊನೆಗೂ ರಮೇಶ್ಗೆ ಮೀರತ್ ಆಸ್ಪತ್ರೆಯಲ್ಲಿ ಹಾಸಿಗೆ ವ್ಯವಸ್ಥೆಯಾಗಿತ್ತು ಎಂದು ಹೇಳಿದ್ರು.