ಪಶ್ಚಿಮ ಬಂಗಾಳ ಚುನಾವಣೆಯಲ್ಲಿ 77 ಸೀಟುಗಳನ್ನ ಗೆದ್ದಿದ್ದ ಬಿಜೆಪಿ ಇದೀಗ 2 ಸ್ಥಾನಗಳನ್ನ ಕಳೆದುಕೊಂಡಿದೆ. 2 ಕ್ಷೇತ್ರದಲ್ಲಿ ಗೆಲುವನ್ನ ಸಾಧಿಸಿದ ಸಂಸದರು ಈ ಸ್ಥಾನದಲ್ಲೇ ಮುಂದುವರಿಯಲು ನಿರ್ಧರಿಸಿದ ಕಾರಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಂಖ್ಯಾಬಲ 77 ರಿಂದ 75ಕ್ಕೆ ಇಳಿಕೆ ಕಂಡಿದೆ.
ಜಗನ್ನಾಥ್ ಸರ್ಕಾರ ಸಾಂತಿಪುರ ಕ್ಷೇತ್ರದಲ್ಲಿ ಜಯಭೇರಿ ಬಾರಿಸೋದ್ರ ಮೂಲಕ ಶಾಸಕರಾಗಿ ಆಯ್ಕೆಯಾಗಿದ್ರು. ಅದೇ ರೀತಿ ನಿಸಿತ್ ಪ್ರಾಮಾಣಿಕ್ ಸಹ ದಿನ್ಹಟಾ ಕ್ಷೇತ್ರದಿಂದ ಗೆಲುವನ್ನ ಸಾಧಿಸಿದ್ರು. ಇದೀಗ ಇವರಿಬ್ಬರೂ ವಿಧಾನಸಭೆ ಸ್ಪೀಖರ್ ಬಿಮನ್ ಬ್ಯಾನರ್ಜಿಗೆ ತಮ್ಮ ರಾಜೀನಾಮೆ ಪತ್ರವನ್ನ ಸಲ್ಲಿದ್ದಾರೆ.
ಕೂಚ್ ಬೆಹರ್ ಸಂಸದ ನಿಸಿತ್ ಪ್ರಾಮಾಣಿಕ್ ಹಾಗೂ ರಾಣಾಘಾಟ್ ಕ್ಷೇತ್ರದ ಸಂಸದ ಜಗನ್ನಾಥ್ ಸರ್ಕಾರ ಸಂಸದ ಸ್ಥಾನದಲ್ಲಿಯೇ ಮುಂದುವರಿಯಲು ನಿರ್ಧರಿದ್ದಾರೆ. ಹೀಗಾಗಿ ಬುಧವಾರ ಅವರು ಸ್ಪೀಕರ್ ಬಿಮನ್ ಬ್ಯಾನರ್ಜಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ರು.
ಇನ್ನು ಈ ವಿಚಾರವಾಗಿ ಮಾತನಾಡಿದ ಪ್ರಾಮಾಣಿಕ್, ನಾವು ಪಕ್ಷದ ನಿರ್ಧಾರದಂತೆ ನಡೆದುಕೊಂಡಿದ್ದೇವೆ. ಪಕ್ಷದ ನಾಯಕರು ನಾವು ಸಂಸದ ಸ್ಥಾನದಲ್ಲೇ ಮುಂದುವರಿಬೇಕು ಎಂದು ಹೇಳಿದ್ರು. ಹಾಗೂ ನಾವು ಅದೇ ರೀತಿ ನಡೆದುಕೊಂಡೆವು ಎಂದು ಹೇಳಿದ್ದಾರೆ.