ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಗ್ಗೆ ಬಿಜೆಪಿ ಮುಖಂಡ ಅನುಪಮ್ ಹಜ್ರಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕೊರೊನಾ ಪಾಸಿಟಿವ್ ಬಂದ್ರೆ ಮಮತಾ ಬ್ಯಾನರ್ಜಿಯವರನ್ನು ಅಪ್ಪಿಕೊಳ್ತೇನೆ ಎಂದಿದ್ದರು. ಈಗ ಅನುಪಮ್ ಹಜ್ರಾಗೆ ಕೊರೊನಾ ಕಾಣಿಸಿಕೊಂಡಿದೆ.
ಕೆಲ ದಿನಗಳ ಹಿಂದೆ ಅನುಪಮ್ ಹಜ್ರಾ, ಕೊರೊನಾ ವೈರಸ್ ಸೋಂಕಿಗೆ ಒಳಗಾದ್ರೆ ಮಮತಾ ಬ್ಯಾನರ್ಜಿ ಅಪ್ಪಿಕೊಳ್ತೆನೆ. ಅವರಿಗೂ ಕೋವಿಡ್ -19 ರೋಗಿಗಳ ಕುಟುಂಬಗಳ ನೋವು ಅರ್ಥವಾಗ್ಲಿ ಎಂದಿದ್ದರು. ಅನುಪಮ್ ಹಜ್ರಾ ಹೇಳಿಕೆಯನ್ನು ತೃಣಮೂಲ ಕಾಂಗ್ರೆಸ್ ಮುಖಂಡರು ವಿರೋಧಿಸಿದ್ದರು.
ಹಜ್ರಾ, ತೃಣಮೂಲ ಕಾಂಗ್ರೆಸ್ ಮಾಜಿ ಸಂಸದ. ಕಳೆದ ವರ್ಷ ಬಿಜೆಪಿಗೆ ಸೇರಿದ್ದಾರೆ. ರಾಜ್ಯದಲ್ಲಿ ಕೋವಿಡ್ -19ನಿಂದ ಸಾವನ್ನಪ್ಪುತ್ತಿರುವವರ ಅಂತ್ಯಕ್ರಿಯೆ ನಡೆಸುತ್ತಿರುವ ರೀತಿ ದುಃಖಕರವಾಗಿದೆ ಎಂದು ಹಜ್ರಾ ಹೇಳಿದ್ದರು. ಬ್ಯಾನರ್ಜಿ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ ಎಂದು ಆರೋಪ ಮಾಡಿದ್ದರು. ಮೃತರ ಮುಖವನ್ನು ಕುಟುಂಬಕ್ಕೆ ತೋರಿಸುತ್ತಿಲ್ಲ. ಸತ್ತ ನಾಯಿ, ಬೆಕ್ಕಿನ ಜೊತೆಯೂ ನಾವು ಹೀಗೆ ನಡೆದುಕೊಳ್ಳುವುದಿಲ್ಲವೆಂದು ಹಜ್ರಾ ಹೇಳಿದ್ದರು. ಹಜ್ರಾ ವಿರುದ್ಧ ತೃಣಮೂಲ ಕಾಂಗ್ರೆಸ್ ನಾಯಕರು ಪೊಲೀಸರಿಗೆ ದೂರು ನೀಡಿದ್ದರು.