ನವದೆಹಲಿ: ಜುಲೈನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಬೇಕಿದ್ದು, ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಪುಟ ಪುನಾರಚನೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಗಡಿಯಲ್ಲಿ ಚೀನಾ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದರುವುದರಿಂದ ತಕ್ಕ ಪಾಠ ಕಲಿಸಲು ರಕ್ಷಣಾ ಸಚಿವರನ್ನು ಬದಲಿಸಲಾಗುವುದು. ರಾಜನಾಥ್ ಸಿಂಗ್ ಅವರಿಗೆ ಗೃಹ ಖಾತೆ ವಹಿಸಿ ಗೃಹ ಸಚಿವ ಅಮಿತ್ ಶಾ ಅವರನ್ನು ರಕ್ಷಣಾ ಸಚಿವ ಸ್ಥಾನಕ್ಕೆ ನಿಯೋಜಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಲಾಕ್ಡೌನ್ ಬಹುತೇಕ ಸಡಿಲಿಕೆ ಆಗಿರುವುದರಿಂದ ಸಂಪುಟ ಪುನರ್ ರಚನೆಗೆ ಪ್ರಧಾನಿ ಮೋದಿ ಚಿಂತನೆ ನಡೆಸಿದ್ದು ರಕ್ಷಣಾ ಖಾತೆ ಜವಾಬ್ದಾರಿಯನ್ನು ಅಮಿತ್ ಶಾ ಅವರಿಗೆ ವಹಿಸುವ ಸಾಧ್ಯತೆ ಇದೆ. ಇನ್ನು ಬಿಜೆಪಿಯಲ್ಲಿಯೂ ಹಲವು ಬದಲಾವಣೆಗಳಾಗಲಿವೆ. ಸಂಘಟನಾತ್ಮಕ ಬದಲಾವಣೆ ಹಿನ್ನೆಲೆಯಲ್ಲಿ ಪ್ರಮುಖರಿಗೆ ಮತ್ತಷ್ಟು ಜವಾಬ್ದಾರಿ ನೀಡಲಾಗುವುದು. ಹಲವರ ಸ್ಥಾನ ಬದಲಿಸಲಾಗುವುದು ಎನ್ನಲಾಗಿದೆ.