ಚುನಾವಣೆ ಗೆಲ್ಲಲು ಅಭ್ಯರ್ಥಿಗಳು ಏನೆಲ್ಲಾ ಗಿಮಿಕ್‌ಗಳನ್ನು ಮಾಡುತ್ತಾರೆ ಎಂದು ನಾವೆಲ್ಲಾ ನೋಡಿಯೇ ಇದ್ದೇವೆ. ತೆಲಂಗಾಣದ ನಾರ್ಗಾರ್ಜುನ ಸಾಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಫರ್ಧಿಸುತ್ತಿರುವ ಪನುಗೋತು ರವಿಕುಮಾರ್ ನಾಯ್ಕ್ ಮತದಾರರ ಕಾಲಿಗೆ ಬಿದ್ದು, ಕಣ್ಣೀರು ಹಾಕಿ ಮತಯಾಚನೆ ಮಾಡುತ್ತಿದ್ದಾರೆ.
36 ವರ್ಷದ ಈತ ವೃತ್ತಿಯಲ್ಲಿ ವೈದ್ಯರಾಗಿದ್ದು, ತಮ್ಮ ನಾಮಪತ್ರ ಸಲ್ಲಿಸಿದ ಬೆನ್ನಿಗೇ ಇಲ್ಲಿನ ತ್ರಿಪುರಂ ಮಂಡಲದಲ್ಲಿರುವ ತಮ್ಮ ಊರು ಪಲುಗಾ ತಾಂಡಾಗೆ ಭೇಟಿ ಕೊಟ್ಟು ಮತಯಾಚನೆ ಮಾಡಿದ್ದಾರೆ. ಈ ವೇಳೆ ಕಣ್ಣೀರಧಾರೆಯಾದ ನಾಯ್ಕ್ ತಮ್ಮೂರಿನ ಮತದಾರರೆದುರು ಭಾವುಕರಾಗಿದ್ದಾರೆ. ಗ್ರಾಮಸ್ಥರ ಪಾದಗಳನ್ನು ಸ್ಪರ್ಶಿಸಿ ಗೊಳೋ ಎಂದು ಅಳುತ್ತಾ ನಾಯ್ಕ್ ಅವರು ಮತಯಾಚನೆ ಮಾಡಿದ್ದಾರೆ.
ಇದೀಗ ಕೇರಳ ಪೊಲೀಸರಿಂದಲೂ ʼಬೋನಿ ಎಂʼ ಹಾಡು ಬಳಕೆ
“ನನ್ನೂರಿನ ಮಂದಿಯ ಕಾಲಿಗೆ ಬಿದ್ದು ಮತಯಾಚನೆ ಮಾಡುವುದರಿಂದ ನಾಚಿಕೆ ಪಡುವಂಥದ್ದೇನೂ ಇಲ್ಲ” ಎಂದು ರವಿಕುಮಾರ್ ನಾಯ್ಕ್ ಹೇಳಿಕೊಂಡಿದ್ದಾರೆ.
ಇದೇ ವಿಚಾರವನ್ನು ಮುಂದಿಟ್ಟುಕೊಂಡ ರವಿಕುಮಾರ್ ನಾಯ್ಕ್ ರ ರಾಜಕೀಯ ವಿರೋಧಿಗಳು, ಅವರೊಬ್ಬ ದುರ್ಬಲ ಅಭ್ಯರ್ಥಿ. ಅದಕ್ಕೇ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಆಪಾದನೆ ಮಾಡಿದ್ದಾರೆ.