
ಕೊರೊನಾ ವೈರಸ್‌ಗೆ ಮದ್ದು ಕಂಡು ಹಿಡಿಯಲು ಇಡೀ ಜಗತ್ತೇ ಹರಸಾಹಸ ಪಡುತ್ತಿದೆ. ಇದೇ ವೇಳೆ ಭಾರತದಲ್ಲಿ ಈ ಸಾಂಕ್ರಾಮಿಕವು ಅಳಿಯಲಿ ಎಂದು ಕೆಲವೊಂದು ಜನ ದೇವರಿಗೆ ಮೊರೆ ಹೋಗುತ್ತಿದ್ದು ಮೂಢ ನಂಬಿಕೆಗಳನ್ನು ಪಾಲಿಸುತ್ತಿದ್ದಾರೆ.
ಉತ್ತರ ಪ್ರದೇಶದ ಸೀತಾಪುರದ ’ಕೊರೊನಾ’ ಹೆಸರಿನ ಗ್ರಾಮವೊಂದು ಇದ್ದು, ಈ ಗ್ರಾಮಸ್ಥರಿಗೆ ತಮ್ಮ ಊರಿನ ಹೆಸರೇ ಒಂದು ರೀತಿಯ ಶಾಪವೆಂಬಂತಾಗಿಬಿಟ್ಟಿದೆ. ಅಕ್ಕಪಕ್ಕದ ಗ್ರಾಮಸ್ಥರು ಈ ಊರಿಗೆ ಬರಲು ಹಿಂದೇಟು ಹಾಕುತ್ತಿದ್ದು, ಕೊರೊನಾ ಗ್ರಾಮಸ್ಥರಿಗೆ ಗರಬಡಿದಂತಾಗಿದೆ.
ಇದೇ ವೇಳೆ, ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಕೊರೋನಾ ವೈರಸ್‌ಹೋಗಲಾಡಿಸಲು ಜನರು ’ಕೊರೋನಾ ದೇವಿ’ಯ ಪೂಜೆಗೆ ಮೊರೆ ಹೋಗಿದ್ದಾರೆ. ತೃತೀಯ ಲಿಂಗಿಗಳು ಸೇರಿಕೊಂಡು ಮಾಡುತ್ತಿರುವ ಈ ವಿಶೇಷ ಪೂಜೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.