ಉತ್ತರಪ್ರದೇಶದ ಬಾಂಡಾದ ಬಾಬೇರು ಪ್ರದೇಶದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. 22 ವರ್ಷದ ಯುವಕ ನಾಲಿಗೆ ಕತ್ತರಿಸಿ ದೇವರಿಗೆ ಅರ್ಪಿಸಿದ್ದಾನೆ.
ಭತಿ ಗ್ರಾಮದ ದೇವಾಲಯವೊಂದರಲ್ಲಿ ಆತ್ಮರಾಮ್(22) ದೇವಸ್ಥಾನಕ್ಕೆ ಹೋಗಿದ್ದು ನಾಲಿಗೆಯನ್ನು ಕತ್ತರಿಸಿ ದೇವರಿಗೆ ಅರ್ಪಿಸಿದ್ದಾನೆ ಎಂದು ಪೊಲೀಸ್ ಠಾಣಾಧಿಕಾರಿ ಜೈ ಶ್ಯಾಮ್ ಶುಕ್ಲಾ ತಿಳಿಸಿದ್ದಾರೆ. ಶನಿವಾರ ಘಟನೆ ನಡೆದಿದ್ದು, ಮಾಹಿತಿ ನಂತರ ಪೊಲೀಸರು ಸ್ಥಳಕ್ಕೆ ತಲುಪಿ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಆತನ ಸ್ಥಿತಿ ಸ್ಥಿರವಾಗಿದೆ.
ಆತ್ಮರಾಮ್ ತಂದೆ ರಾಮ್ ಸಿಂಗ್ ಅವರು ತಮ್ಮ ಮಗ ಮಾನಸಿಕ ಅಸ್ವಸ್ಥನಾಗಿದ್ದಾನೆ. ನವರಾತ್ರಿಯಲ್ಲಿ ಒಂಬತ್ತು ದಿನ ಉಪವಾಸ ಆಚರಿಸುತ್ತಿದ್ದ. ಕೆಲವರು ತಮ್ಮ ಮಗನಿಗೆ ದಾರಿ ತಪ್ಪಿಸಿದ್ದಾರೆ. ಹೀಗಾಗಿ ನಾಲಿಗೆ ಕತ್ತರಿಸಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.