ಮನೆಯಿಂದ ಕೆಲಸ ಮಾಡುವಾಗ ಬಹಳಷ್ಟು ರೀತಿಯ ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸುತ್ತಲೇ ಇರುತ್ತೇವೆ. ಕೆಲವೊಮ್ಮೆ ಆನ್ಲೈನ್ ಮೀಟಿಂಗ್ ವೇಳೆ ಮನೆ ಮಂದಿ ಮಾತನಾಡುವುದು, ಮಕ್ಕಳು ಗದ್ದಲ ಮಾಡುವುದು ಮೈಕ್ ಮೂಲಕ ಮೀಟಿಂಗ್ಗೆ ಅಡ್ಡಿಯಾದಾಗ ಒಂದು ರೀತಿಯ ಕಿರಿಕಿರಿ ಆಗುತ್ತದೆ.
ಜೂಮ್ ಮೀಟಿಂಗ್ನಲ್ಲಿ ಭಾಗಿಯಾಗಿದ್ದ ತನ್ನ ಪತಿಗೆ ಮುತ್ತಿಕ್ಕಲು ಬಂದ ಮಡದಿಯೊಬ್ಬರ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋವನ್ನು ಉದ್ಯಮಿ ಹರ್ಷ್ ಗೋಯೆಂಕಾ ಅವರು ಶೇರ್ ಮಾಡಿದ್ದಾರೆ.
ಮೀಟಿಂಗ್ನಲ್ಲಿ ಮಾತನಾಡುವ ವೇಳೆ ಪತಿರಾಯ ಮಾತನಾಡುತ್ತಾ, “ಜಿಡಿಪಿಗೆ ದೊಡ್ಡ ಮಟ್ಟದಲ್ಲಿ ನೆರವಾಗುವ…….,” ಎನ್ನುತ್ತಿರುವಂತೆಯೇ ಕೋಣೆಗೆ ಪ್ರವೇಶಿಸುವ ಆತನ ಮಡದಿ ತನ್ನ ಪತಿಗೆ ಕಿಸ್ ಮಾಡಲೆಂದು ಬೆಂಡ್ ಆಗುತ್ತಲೇ, “ಎಂಥ ನಾನ್ಸೆನ್ಸ್ ಮಾಡುತ್ತಿರುವೆ? ಕ್ಯಾಮೆರಾ ಆನ್ ಇದೆ” ಎಂದು ಹೇಳಿ ಆತ ಆಕೆಯನ್ನು ಬದಿಗೆ ತಳ್ಳುವುದನ್ನು ನೋಡಬಹುದಾಗಿದೆ.